ಚಂಡೀಗಢ: ಹಬ್ಬದ ದಿನವೇ ಕಾರ್ ಕಾಲುವೆಗೆ ಉರುಳಿದ ಪರಿಣಾಮ ಮೂರು ಮಕ್ಕಳು ಸೇರಿದಂತೆ ಎಂಟು ಜನರು ಜಲಸಮಾಧಿಯಾಗಿರುವ ಘಟನೆ ಹರಿಯಾಣದ ಕೈಥಲ್ ಜಿಲ್ಲೆಯಲ್ಲಿ ನಡೆದಿದೆ. ಒಂದೇ ಕುಟುಂಬದ ಎಂಟು ಜನರು ಹಬ್ಬದ ಹಿನ್ನೆಲೆ ದೇವಸ್ಥಾನಕ್ಕೆ ತೆರಳುತ್ತಿದ್ದರು. ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯೆ ಕಾರ್ ಅಪಘಾತಕ್ಕೊಳಗಾಗಿದೆ. ಮೃತರೆಲ್ಲರೂ ಡೀಗ್ ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದೆ. ಕಾರ್ ಮುಂದಡೀ ಗ್ರಾಮದ ಬಳಿಯ ಕಾಲುವೆಗೆ ಉರುಳಿ ಬಿದ್ದಿದೆ.
ಇಂದು ಬೆಳಗ್ಗೆ ಕಾರ್ ಕಾಲುವೆಗೆ ಬೀಳುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಆಗಮನಕ್ಕೂ ಮುನ್ನವೇ ಸ್ಥಳೀಯರು ಕಾಲುವೆಗೆ ಧುಮುಕಿ ರಕ್ಷಣಾಕಾರ್ಯ ಆರಂಭಿಸಿದ್ದರು. ಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತಿದ್ದ ಕಾರಣ ಸ್ಥಳೀಯರಿಂದ ಯಾರನ್ನು ರಕ್ಷಣೆ ಮಾಡಿಲ್ಲ. ನಂತರ ಬಂದ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಎಳು ಶವಗಳನ್ನು ಮೇಲಕ್ಕೆತ್ತಲಾಗಿದೆ. ಇನ್ನೊಂದು ಶವಕ್ಕಾಗಿ ಶೋಧ ಕಾರ್ಯ ನಡೆದಿದೆ ಎಂದು ವರದಿಯಾಗಿದೆ. 15 ವರ್ಷದ ಬಾಲಕಿಯ ಶವ ಸಿಕ್ಕಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರ್ ಚಾಲಕ ಬದುಕುಳಿದಿದ್ದು, ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಒಂದೇ ಕಾರಿನಲ್ಲಿ ಒಟ್ಟು 9 ಮಂದಿ ಗುಣಾದಲ್ಲಿರುವ ಗುರು ರವಿದಾಸ ಮಂದಿರಕ್ಕೆ ಹೊರಟಿದ್ದರು. 9ರಲ್ಲಿ ಓರ್ವ ಎಸ್ಕೇಪ್ ಆಗಿದ್ದು, ಏಳು ಶವ ಮೇಲೆತ್ತಲಾಗಿದೆ. 15 ವರ್ಷದ ಬಾಲಕಿಗಾಗಿ ಹುಡುಕಾಟ ಆರಂಭಿಸಿದ್ದು,
ಆಕೆಯೂ ಸಾವನ್ನಪ್ಪಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಹೇಳಿದ್ದಾರೆ.
ಶನಿವಾರ ಬೆಳಗ್ಗೆ ಸುಮಾರು 9 ಮುಕ್ಕಾಲಿಗೆ ಕಾರ್ ಕಾಲುವೆ ಮಾರ್ಗವಾಗಿ ತೆರಳುತ್ತಿತ್ತು. ಈ ಸಮಯದಲ್ಲಿ ದಿಢೀರ್ ಅಂತ ಕಾಲುವೆಗೆ ಕಾರ್ ಉರುಳಿತು. ಬೆಳಗ್ಗೆ 10.15ರಷ್ಟರಲ್ಲಿಯೇ ಕಾರ್‌ನ್ನು ಮೇಲಕ್ಕೆತ್ತಲಾಯ್ತು. ಕಾರ್‌ನಲ್ಲಿದ್ದರನ್ನು ರಕ್ಷಿಸಲು ಸುತ್ತಲಿನ ಜನರು ಸ್ವಲ್ಪವೂ ಯೋಚಿಸದೇ ಕಾಲುವೆಗೆ ಧಮುಕಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಕಾಲುವೆಗೆ ಕಾರ್ ಉರುಳಿದ ಪ್ರಕರಣದಲ್ಲಿ ಎಂಟು ಜನರು ಮೃತರಾಗಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರು ಹಾಗೂ ಮೂರು ಮಕ್ಕಳು ಸಹ ಸೇರಿದ್ದಾರೆ. ಶೀಘ್ರದಲ್ಲಿ ಕಾಲುವೆಯಲ್ಲಿ ಕೊಚ್ಚಿ ಹೋಗಿರುವ ಬಾಲಕಿ ಶವ ಪತ್ತೆ ಮಾಡಲಾಗುವುದು. ಚಾಲಕ ಬದುಕುಳಿದಿದ್ದು, ಆತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಡಿಎಸ್ಪಿ ಲಲಿತ್ ಕುಮಾರ್ ಮಾಹಿತಿ ನೀಡಿದ್ದಾರೆ. ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ.