ಬಂಟ್ವಾಳ ,ತಾಯಿಯನ್ನು ದೇವರೆಂದು ಪೂಜಿಸುವ ದೇಶ ನಮ್ಮದು, ಶಕ್ತಿ ಆರಾಧನೆಯಿಂದ ಜಗತ್ತಿನ ಉದ್ದಾರ ಸಾಧ್ಯ ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ,ವಿನಾ ಕಾರಣ ಹಿಂದೂಗಳ ಮೇಲೆ ಕೇಸುಗಳನ್ನು ಹಾಕುವ ಮೂಲಕ ಹಿಂದುಗಳನ್ನು ದಮನಿಸುವ ಕೆಲಸ ನಡೆಯುತ್ತಿದೆ, ವಿಶ್ವಕ್ಕೆ ಒಳಿತನ್ನು ಬಯಸುವ ಧರ್ಮವೊಂದಿದ್ದಾರೆ ಅದು ಹಿಂದೂ ಧರ್ಮ. ಉತ್ಸವಗಳು ಸಮಾಜದ ಒಗ್ಗಟ್ಟಿಗೆ ಪ್ರೇರಣೆಯಾಗಬೇಕು. ನಮ್ಮ ಪರಂಪರೆ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮ ಮುಂದಿದೆ ಎಂದು ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ಶ್ರೀ ಶಾರದಾ ಪೂಜಾ ಸೇವಾ ವೇದಿಕೆ ಕೊಡ್ಮಾಣ್ ಇವರ ಆಶ್ರಯದಲ್ಲಿ ನಡೆಯುವ 36ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಮೂರನೇ ದಿನದ ಕಾರ್ಯಕ್ರಮದ ಅಂಗವಾಗಿ ಕೊಡಮಣ್ಣು ಕಾಂತಪ್ಪ ಶೆಟ್ಟಿ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಿಭಾಗ ಕಾರ್ಯದರ್ಶಿ ವಿಶ್ವ ಹಿಂದು ಪರಿಷತ್ ಮಂಗಳೂರು ದೇವಿ ಪ್ರಸಾದ್ ಶೆಟ್ಟಿ ಕೊಡಮಣ್ಣ ವಹಿಸಿದ್ದರು ಬಿಸೆಂಟ್ ಕಾಲೇಜು ಉಪನ್ಯಾಸಕರು, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ರವಿಪ್ರಭಾ, ದ ಕ ಜಿ ಪಂ ಹಿ ಪ್ರೌಢಶಾಲೆಯ ಸಹಶಿಕ್ಷಕಿ ಭಾರತಿ
, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಪ್ರೇಮಾ, ಮೇರಮಜಲು ಗ್ರಾ.ಪಂ ಅಧ್ಯಕ್ಷ ಸತೀಶ್ ನಾಯ್ಗ ಕೊಡ್ಮಾಣ್ ಕೊಡಿ,ಉತ್ಸವ ಸಮಿತಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಕೊಟ್ಟಿಂಜ , ಕಾರ್ಯದರ್ಶಿ ವಿನೋದ್ ಕುಮಾರ್ ಕೊಡ್ಮಣ್ ವೇದಿಕೆಯಲ್ಲಿದ್ದರು.
ಪ್ರಾಥಮಿಕ ಶಾಲೆಯ ನಿಕಟ ಪೂರ್ವ ಮುಖ್ಯಶಿಕ್ಷಕಿ ಭವಾನಿ ಶಂಕರಿ ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು, ಶಿಕ್ಷಣದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು,
ಪ್ರಮುಖರಾದ ಪ್ರಸಾದ್ ಕುಮಾರ್,ದಾಮೋದರ ನೆತ್ತರಕೆರೆ, ದಿನೇಶ್ ಶೆಟ್ಟಿ ಕೊಟ್ಟಿಂಜ ಮತ್ತಿತರರು ಉಪಸ್ಥಿತರಿದ್ದರು.
ಗೋಪಾಲ ಗೋವಿಂದೋಟ ಸ್ವಾಗತಿಸಿ,ಅರುಣ್ ಶೆಟ್ಟಿ ಕೊಟ್ಟಿಂಜ ವಂದಿಸಿ, ಸಂತೋಷ್ ಶೆಟ್ಟಿ ಕೊಡ್ಮಾಣ್ ನಿರೂಪಿಸಿದರು.















