Coastal Bulletin

ಕಾಬೂಲ್‌ನ ಶಿಕ್ಷಣ ಕೇಂದ್ರವೊಂದರಲ್ಲಿ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 100 ಮಕ್ಕಳು ಸಾವನ್ನಪ್ಪಿದ್ದಾರೆ. ಸ್ಥಳೀಯ ಪತ್ರಕರ್ತರ ಪ್ರಕಾರ,ಘಟನೆಯಲ್ಲಿ ಹೆಚ್ಚಾಗಿ ಹಜಾರಾ ಮತ್ತು ಶಿಯಾ ಜನಾಂಗದ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

ನಗರದ ಪಶ್ಚಿಮದಲ್ಲಿರುವ ದಷ್ಟ್-ಎ-ಬರ್ಚಿ ಪ್ರದೇಶದ ಕಾಜ್ ಶಿಕ್ಷಣ ಕೇಂದ್ರದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.

ಸ್ಥಳೀಯ ಪತ್ರಕರ್ತ ಬಿಲಾಲ್ ಸರ್ವಾರಿ ಅವರು ಟ್ವೀಟ್ ಮಾಡಿದ್ದಾರೆ, ನಾವು ಇದುವರೆಗೆ ನಮ್ಮ ವಿದ್ಯಾರ್ಥಿಗಳ 100 ಮೃತ ದೇಹಗಳನ್ನು ಎಣಿಕೆ ಮಾಡಿದ್ದೇವೆ.ದಾಳಿಯಲ್ಲಿ ಕೊಲ್ಲಲ್ಪಟ್ಟ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. ಯೂನಿವರ್ಸಿಟಿ ಪ್ರವೇಶ

ಪರೀಕ್ಷೆಯಾಗಿದ್ದರಿಂದ ತರಗತಿ ತುಂಬಿ ತುಳುಕುತ್ತಿತ್ತು. ಸ್ಫೋಟದ ಪರಿಣಾಮ ಕೈ-ಕಾಲುಗಳು ಹಾಗೂ ದೇಹದ ಭಾಗಗಳು ಛಿದ್ರ ಛಿದ್ರವಾಗಿದ್ದು, ಇಡೀ ಘಟನಾ ಸ್ಥಳ ಭೀಕರವಾಗಿತ್ತು ಎಂದಿದ್ದಾರೆ.

ಬಾಂಬ್​ ದಾಳಿಗೂ ಮುನ್ನ ತುಂಬಿದ್ದ ತರಗತಿಯ ವಿಡಿಯೋ ಮತ್ತು ದಾಳಿಯ ನಂತರ ಶಾಲೆಯ ಸ್ಥಿತಿ ಮತ್ತು ವಿದ್ಯಾರ್ಥಿಗಳ ಶವಗಳು ಬಿದ್ದಿರುವ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Leave a Comment