ಆಪರೇಷನ್​ ಸಿಂಧೂರ: ಪಾಕ್‌ನ 9 ಉಗ್ರರ ನೆಲೆಗಳ ಮೇಲೆ ಭಾರತ ಕ್ಷಿಪಣಿ ದಾಳಿ

Coastal Bulletin
ಆಪರೇಷನ್​ ಸಿಂಧೂರ: ಪಾಕ್‌ನ 9 ಉಗ್ರರ ನೆಲೆಗಳ ಮೇಲೆ ಭಾರತ ಕ್ಷಿಪಣಿ ದಾಳಿ

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರಬಲ ಪ್ರತಿಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ 9 ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿವೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ನಡೆಸಿದ "ಆಪರೇಷನ್ ಸಿಂಧೂರ" ಎಂಬ ಕಾರ್ಯಾಚರಣೆಯು ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ನೆಲೆ ಮತ್ತು ಲಾಹೋರ್ ಮತ್ತು ಸಿಯಾಲ್ಕೋಟ್ ಬಳಿಯ ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾದ ಮರ್ಕಾಜ್‌ನಂತಹ ಪ್ರಮುಖ ಭಯೋತ್ಪಾದಕ ನೆಲೆಗಳ ಮೇಲೆ ನಡೆದಿದೆ.

ಈ ದಾಳಿಯು "ಕೇಂದ್ರೀಕೃತ, ವಿವೇಚನೆಯ ಹಾಗೂ ಮತ್ತು ಉಲ್ಬಣವಾಗದಂತಹ" ಕಾರ್ಯಾಚರಣೆ ಎಂದು ಎಂದು ಹೇಳಿದೆ. ಯಾವುದೇ ಪಾಕಿಸ್ತಾನಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಲ್ಲ, ಭಾರತವು ನಿಖರ ಗುರಿಗಳ ಆಯ್ಕೆ ಮತ್ತು ದಾಳಿಗಳಲ್ಲಿ ಸಂಯಮವನ್ನು ಪ್ರದರ್ಶಿಸಿದೆ. ಎಲ್‌ಇಟಿ ಮತ್ತು ಜೆಇಎಂ ಶಿಬಿರಗಳನ್ನು ಹೊಂದಿರುವ ಪಿಒಕೆಯ ಕೋಟಿಲ್ ಮತ್ತು ಮುಜಫರಾಬಾದ್ ಕೂಡ ಗುರಿಯಾಗಿಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ದಾಳಿಯ ನಂತರ, "ನ್ಯಾಯ ಒದಗಿಸಲಾಗಿದೆ" ಭಾರತೀಯ ಸೇನೆಯು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದೆ. ಪಾಕಿಸ್ತಾನವೂ ದಾಳಿಗಳ ಬಗ್ಗೆ ದೃಢಪಡಿಸಿದ್ದು, ಇದೊಂದು "ಹೇಡಿತನದ ಕೃತ್ಯ" ಎಂದಿದೆ. ಅಲ್ಲದೆ, ಪಾಕ್ ವಿದೇಶಾಂಗ ಸಚಿವಾಲಯವು ಇದನ್ನು "ಅಪ್ರಚೋದಿತ ಯುದ್ಧ ಕೃತ್ಯ" ಎಂದು ಖಂಡಿಸಿದೆ. ನಾಗರಿಕ ಸಾವುನೋವುಗಳು ಸಂಭವಿಸಿವೆ ಎಂದು ಆರೋಪಿಸಿದೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ "ಸೂಕ್ತ ಉತ್ತರ" ನೀಡುವುದಾಗಿ

ಎಚ್ಚರಿಸಿದ್ದಾರೆ.

ಶಾಲಾ ಕಾಲೇಜು ಬಂದ್

ಆಪರೇಷನ್ ಸಿಂಧೂರ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಮ್ಮು ಕಾಶ್ಮೀರದ ಐದು ಗಡಿ ಜಿಲ್ಲೆಗಳಲ್ಲಿರುವ ಎಲ್ಲಾ ಶಾಲೆ, ಕಾಲೇಜು ಸೇರಿದಂತೆ ಶಿಕ್ಷಣ ಸಂಸ್ಥೆಗಳನ್ನು ಬುಧವಾರ ಬಂದ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಿವೆ, ಇದರಲ್ಲಿ ಜೈಶ್-ಎ-ಮೊಹಮ್ಮದ್ ಭದ್ರಕೋಟೆಯಾದ ಬಹವಾಲ್ಪುರ್ ಮತ್ತು ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾ ನೆಲೆ ಸೇರಿವೆ.

"ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಜಮ್ಮು, ಸಾಂಬಾ, ಕಥುವಾ, ರಾಜೌರಿ ಮತ್ತು ಪೂಂಚ್‌ನಲ್ಲಿರುವ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳು ಇಂದು ಮುಚ್ಚಲ್ಪಡುತ್ತವೆ" ಎಂದು ವಿಭಾಗೀಯ ಆಯುಕ್ತ ರಮೇಶ್ ಕುಮಾರ್ Xನಲ್ಲಿ ತಿಳಿಸಿದ್ದಾರೆ.

Leave a Comment