ನಾಸಿಕ್: ಮಹಾರಾಷ್ಟ್ರ ದಲ್ಲಿ ಅಫ್ಘಾನಿಸ್ತಾನದ ಮೂಲದ 35 ವರ್ಷದ ಮುಸ್ಲಿಂ ಆಧ್ಯಾತ್ಮಿಕ ನಾಯಕನನ್ನು ಮಂಗಳವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಸ್ಥಳೀಯವಾಗಿ 'ಸೂಫಿ ಬಾಬಾ' ಎಂದೇ ಜನಪ್ರಿಯರಾಗಿದ್ದ ಖ್ವಾಜಾ ಸಯ್ಯದ್ ಚಿಶ್ತಿ ಕೊಲೆಯಾದ ಮುಸ್ಲಿಂ ಆಧ್ಯಾತ್ಮಿಕ ನಾಯಕರಾಗಿದ್ದಾರೆ. ಮುಂಬೈನಿಂದ 200 ಕಿ.ಮೀ ದೂರದಲ್ಲಿರುವ ನಾಸಿಕ್‌ನ ಯೋಲಾ ಪಟ್ಟಣದ ಎಂಐಡಿಸಿ ಪ್ರದೇಶದಲ್ಲಿ ಖ್ವಾಜಾ ಸಯ್ಯದ್ ಚಿಶ್ತಿ ಅವರ ಹಣೆಗೆ ಗುಂಡಿಕ್ಕಿ ಕೊಲ್ಲಲಾಗಿದೆ.ಸಯ್ಯದ್
ಚಿಶ್ತಿ ಹಲವಾರು ವರ್ಷಗಳಿಂದ ನಾಸಿಕ್‌ನ ಯೋಲಾ ಪಟ್ಟಣದಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರ ಹತ್ಯೆ ಹಿಂದೆ ಯಾವುದೇ ಧಾರ್ಮಿಕ ಉದ್ದೇಶ ಇದ್ದಂತೆ ತೋರುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹಂತಕರು ಕೃತ್ಯ ಎಸಗಿ ಸಯ್ಯದ್ ಚಿಶ್ತಿ ಅವರ ಎಸ್ಯುವಿನಲ್ಲಿ ಪರಾರಿಯಾಗಿದ್ದಾರೆ.
















