ಲೋಕಸಭಾ ಸಂಸದೆ, ನಟಿ ಕಂಗನಾ ರನೌತ್‌ಗೆ ಕಪಾಳಮೋಕ್ಷ ಮಾಡಿದ್ದ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಬೆಂಗಳೂರಿಗೆ ವರ್ಗಾವಣೆ!

Coastal Bulletin
ಲೋಕಸಭಾ ಸಂಸದೆ, ನಟಿ ಕಂಗನಾ ರನೌತ್‌ಗೆ ಕಪಾಳಮೋಕ್ಷ ಮಾಡಿದ್ದ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಬೆಂಗಳೂರಿಗೆ ವರ್ಗಾವಣೆ!

ಮಂಡಿ ಲೋಕಸಭಾ ಸಂಸದೆ ಹಾಗೂ ನಟಿ ಕಂಗನಾ ರನೌತ್‌ಗೆ ಕಪಾಳಮೋಕ್ಷ ಮಾಡಿದ ಮಹಿಳಾ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರನ್ನು ವರ್ಗಾವಣೆ ಬೆಂಗಳೂರಿಗೆ ಮಾಡಲಾಗಿದೆ.

ಜೂನ್ 6 ರಂದು ಚಂಡೀಗಢದ ಶಹೀದ್ ಭಗತ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಗನಾ ರನೌತ್‌ ಅವರಿಗೆ ಕಪಾಳಮೋಕ್ಷ ಘಟನೆಯ ನಂತರ ಸಿಐಎಸ್ಎಫ್ ಕುಲ್ವಿಂದರ್ ಕೌರ್ ಅವರನ್ನು ಅಮಾನತುಗೊಳಿಸಿತ್ತು ಮತ್ತು ಅವರ ವಿರುದ್ಧ ಆಂತರಿಕ ವಿಚಾರಣೆಯನ್ನು ಪ್ರಾರಂಭಿಸಿತು. ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಅವರ ವಿರುದ್ಧ ತನಿಖಾ ಸಮಿತಿಯನ್ನೂ ರಚಿಸಲಾಗಿತ್ತು.

ಈ ಘಟನೆಯ ನಂತರ ಕುಲ್ವಿಂದರ್ ಕೌರ್ ವಿರುದ್ಧ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣವೂ ದಾಖಲಾಗಿತ್ತು. ಪೊಲೀಸರು ಐಪಿಸಿ ಸೆಕ್ಷನ್ 323 (ಹಲ್ಲೆ) ಮತ್ತು 341 (ರಸ್ತೆ ತಡೆ) ಅಡಿಯಲ್ಲಿ ಈ ಕ್ರಮ ಕೈಗೊಂಡಿದ್ದರು, ಆದರೆ

ಇದನ್ನು ರೈತ ಸಂಘಟನೆಗಳು ವಿರೋಧಿಸಿದ್ದವು.

ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಳಿಕ ಕಂಗನಾ ರನೌತ್‌ ಜೂನ್‌ 6ರಂದು ಚಂಡೀಗಢ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿದ್ದರು. ಇದೇ ವೇಳೆ ಭದ್ರತಾ ತಪಾಸಣೆಯ ವೇಳೆ ಮಹಿಳಾ ಪದೇಯೊಂದಿಗೆ ಸಂಸದೆಯ ವಾಗ್ವಾದ ನಡೆಯಿತು. ಅಲ್ಲದೆ. ಸಿಐಎಸ್‌ಎಫ್ ಮಹಿಳಾ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ್ದರು.

ರೈತರ ಚಳುವಳಿಯಲ್ಲಿ ಭಾಗವಹಿಸಿದವರು 100 ರೂಪಾಯಿ ಪಡೆದು ಭಾಗವಹಿಸಿದ್ದಾರೆ ಎಂದು ಕಂಗನಾ ತಿಳಿಸಿದ್ದರು. ಇವರು ಹೇಳಿಕೆ ನೀಡಿದ್ದ ರೈತ ಪ್ರತಿಭಟನೆಯಲ್ಲಿ ಕುಲ್ವಿಂದರ್ ಕೌರ್ ತಾಯಿ ಸಹ ಇದ್ದಳು ಎಂದು ಹೇಳುತ್ತಿರುವ ಮಹಿಳಾ ಕಾನ್‌ಸ್ಟೆಬಲ್‌ನ ವೀಡಿಯೊ ವೈರಲ್ ಆಗಿತ್ತು.

Leave a Comment