ಕೇರಳ ಗಡಿ ಭಾಗದಲ್ಲಿ ಪೊಲೀಸರು ಹಾಗೂ ನಕ್ಸಲರ ಮಧ್ಯೆ ಗುಂಡಿನ ಚಕಮಕಿ-ಇಬ್ಬರ ಬಂಧನ,ಮೂವರು ಪರಾರಿ.

Coastal Bulletin
ಕೇರಳ ಗಡಿ ಭಾಗದಲ್ಲಿ ಪೊಲೀಸರು ಹಾಗೂ ನಕ್ಸಲರ ಮಧ್ಯೆ ಗುಂಡಿನ ಚಕಮಕಿ-ಇಬ್ಬರ ಬಂಧನ,ಮೂವರು ಪರಾರಿ.

ವಯನಾಡ್‌: ಮೊಬೈಲ್‌ ಚಾರ್ಜ್‌ ಮಾಡಿಕೊಳ್ಳಲು ನಕ್ಸಲರು ಮನೆಯೊಂದಕ್ಕೆ ಬಂದಾಗ ಪೊಲೀಸರು ದಾಳಿ ನಡೆಸಿದ ಘಟನೆ ಕರ್ನಾಟಕ - ಕೇರಳ ಗಡಿಯ ವಯನಾಡು ಜಿಲ್ಲೆಯಲ್ಲಿ ನಡೆದಿದೆ. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ನಕ್ಸಲರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಐವರು ನಕ್ಸಲರು ಮನೆಯೊಂದಕ್ಕೆ ಬಂದು ತಮ್ಮ ಮೊಬೈಲ್‌ಗಳನ್ನು ಚಾರ್ಜ್‌ ಮಾಡಿಕೊಳ್ಳುತ್ತಿದ್ದರು. ಇದರ ಸುಳಿವು ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಒಜಿ) ಪೊಲೀಸರಿಗೆ ಸಿಕ್ಕಿದ್ದು, ನಕ್ಸಲರ ಮೇಲೆ ದಾಳಿ ನಡೆಸಿದ್ದಾರೆ. ಆಗ

ಚಕಮಕಿ ನಡೆದಿದೆ. ಬಳಿಕ ಚಂದ್ರು ಹಾಗೂ ಉನ್ನಿಮಾಯಾ ಎಂಬ ಇಬ್ಬರು ನಕ್ಸಲರನ್ನು ಪೊಲೀಸರು ಬಂಧಿಸಿದ್ದಾರೆ ಹಾಗೂ ಹತ್ತಿರದ ಪೊಲೀಸ್‌ ಕ್ಯಾಂಪ್‌ಗೆ ಹೆಚ್ಚಿನ ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಈ ವೇಳೆ ಮೂವರು ಪರಾರಿಯಾಗಿದ್ದಾರೆ.


Leave a Comment