ಬಾಯಾರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಳೆಯಿಂದ ನವರಾತ್ರಿ ಉತ್ಸವ

Coastal Bulletin
ಬಾಯಾರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಳೆಯಿಂದ ನವರಾತ್ರಿ ಉತ್ಸವ

ಕಾಸರಗೋಡು : ಬಾಯಾರು ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವರು ಮತ್ತು ಮಲರಾಯ ದೈವಂಗಳ ಭಂಡಾರ ಇಲ್ಲಿ 6.10.2021 ರಿಂದ 14.10.2021 ರ ವರೆಗೆ ನವರಾತ್ರಿ ಉತ್ಸವವು ಸಪ್ತಶತೀ ಪಾರಾಯಣದೊಂದಿಗೆ ನಡೆಯಲಿರುವುದು.

ಪ್ರತಿದಿನ ಸಂಜೆ 6.30ರಿಂದ ರಾತ್ರಿ 9 ರ ತನಕ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಂತರ ನವರಾತ್ರಿ ಪೂಜಾ ಸೇವೆ ನಡೆಯಲಿರುವುದು.


ತಾ.10.10.2021 ರಂದು ಬೆಳಿಗ್ಗೆ 9.00 ರಿಂದ ಚಂಡಿಕಾಯಾಗ, 14.10.2021 ರಂದು ಆಯುಧ ಪೂಜೆ, 15.10.2021 ರಂದು ಬೆಳಿಗ್ಗೆ 9.00 ರಿಂದ ವಿದ್ಯಾರಂಭ ಕಾರ್ಯಕ್ರಮ ನಡೆಯಲಿರುವುದು ಎಂದು ಉತ್ಸವ ಸಮಿತಿ, ಸೇವಾ ಸಮಿತಿ, ಆಡಳಿತ ಮಂಡಳಿ ತಿಳಿಸಿದೆ.

Leave a Comment