Coastal Bulletin

ಕಾಸರಗೋಡು : ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಸಮುದ್ರದ ಮಧ್ಯೆ ಮಗುಚಿ ಬಿದ್ದು ಮೂವರು ಮೀನುಗಾರರು ನಾಪತ್ತೆಯಾಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.ದೋಣಿಯಲ್ಲಿ7 ಮಂದಿ ಮೀನುಗಾರರು ಇದ್ದರೆನ್ನಲಾಗಿದ್ದು, ನಾಲ್ವರು ಈಜಿ ದಡ ಸೇರಿದ್ದಾರೆ. ಇತರ ಮೂವರು ನೀರುಪಾಲಾಗಿದ್ದಾರೆ ಎನ್ನುವ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ.

ದೋಣಿಯಲ್ಲಿ7 ಮಂದಿ ಮೀನುಗಾರರು ಇದ್ದರೆನ್ನಲಾಗಿದ್ದು, ನಾಲ್ವರು ಈಜಿ ದಡ ಸೇರಿದ್ದಾರೆ. ಇತರ ಮೂವರು ನೀರುಪಾಲಾಗಿದ್ದಾರೆ ಎನ್ನುವ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ.

ನಾಪತ್ತೆ ಆದ ಕಾರ್ಮಿಕರನ್ನು ಸಂದೀಪ್, ಕಾರ್ತಿಕ್ ಹಾಗೂ ರತೀಶ್ ಎಂದು ಗುರುತಿಸಲಾಗಿದ್ದು ಕರಾವಳಿ ಕಾವಲು ಪಡೆಯಿಂದ ಹುಡುಕಾಟ

ಮುಂದುವರಿದಿದೆ.

ಕಾಸರಗೋಡು ನಗರ ಹೊರವಲಯದ ಸಮುದ್ರ ತೀರದ ನಿವಾಸಿಗಳು ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿ ಮಗುಚಿ ಬಿದ್ದಿದೆ ಎನ್ನಲಾಗಿದೆ.ಬೃಹತ್ ಮೀನುಗಾರಿಕೆಗೆ ನಿಷೇಧ ಇರುವ ಕಾರಣ ಸ್ಥಳೀಯ ಮೀನುಗಾರರು ಸಣ್ಣ ದೋಣಿಯಲ್ಲಿ ಮೀನು ಹಿಡಿಯಲು ತೆರಳಿದ್ದರು.

Leave a Comment