Coastal Bulletin

ಇಸ್ರೇಲ್‌: ನೂತನ ಪ್ರಧಾನಿಯಾಗಿ ನೆಫ್ತಾಲಿ ಬೆನೆಟ್ ಆಯ್ಕೆ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಅರಬ್ ಪಕ್ಷ 'ರಾಮ್' ಬೆಂಬಲ ನೆಫ್ತಾಲಿ ಬೆನೆಟ್ ಗೆ ಟ್ವೀಟ್ ಮೂಲಕ ಶುಭಾಶಯಗಳು ಕೋರಿದ ಪ್ರಧಾನಿ ಮೋದಿ

ಇಸ್ರೇಲ್ ನಲ್ಲಿ 12 ವರ್ಷಗಳ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಡಳಿತ ಕೊನೆಗೊಂಡಿದ್ದು, ರಾಷ್ಟ್ರೀಯವಾದಿ ನೆಫ್ತಾಲಿ ಬೆನ್ನೆಟ್ ಸಮ್ಮಿಶ್ರ ಸರ್ಕಾರದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಇಸ್ರೇಲ್‌ನ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಡಪಂಥೀಯ ಅರಬ್ ಯೇತರ ಪಕ್ಷಗಳು, ಸ್ವತಂತ್ರ ಅರಬ್ ಪಕ್ಷ ರಾಮ್ ರಾಷ್ಟ್ರೀಯವಾದಿ ನೆಫಾಲಿ ಬೆನ್ನೆಟ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ್ದು, ಅನೂಹ್ಯವಾದ ರೀತಿಯಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಗಳನ್ನು ಹೊಂದಿರುವ ಪಕ್ಷಗಳೇ ಸರ್ಕಾರ ರಚಿಸಿರುವುದು ಅಚ್ಚರಿ

ಮೂಡಿಸಿದೆ.

ಇಸ್ರೇಲ್ ನೂತನ ಪ್ರಧಾನಿ ನಾಫ್ತಾಲಿ ಬೆನೆಟ್ ಅವರಿಗೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮೂಲಕ ಶುಭಾಶಯ ಕೋರಿ ‘ಘನತೆವೆತ್ತ ನಾಫ್ತಾಲಿ ಬೆನೆಟ್ ಇಸ್ರೇಲ್ ಪ್ರಧಾನಿಯಾದುದಕ್ಕೆ ಅಭಿನಂದನೆಗಳು. ಮುಂದಿನ ವರ್ಷ ರಾಜತಾಂತ್ರಿಕ ಸಂಬಂಧಗಳು ಮೇಲ್ದರ್ಜೆಗೇರಿದ 30 ವರ್ಷಗಳನ್ನ ನಾವು ಆಚರಿಸುತ್ತಿರುವಾಗ, ನಾನು ನಿಮ್ಮನ್ನು ಭೇಟಿ ಮಾಡಲು ಮತ್ತು ನಮ್ಮ ಎರಡೂ ದೇಶಗಳ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯನ್ನ ಆಳಗೊಳಿಸಲು ಎದುರು ನೋಡುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

Leave a Comment