ಮಾಸ್ಕೋ, ಜುಲೈ 06: ರಷ್ಯಾದ ಪೂರ್ವವಲಯದಲ್ಲಿ ಮಂಗಳವಾರ ಬೆಳಿಗ್ಗೆ ಕಣ್ಮರೆಯಾಗಿದ್ದ AN 26 ವಿಮಾನ ಅವಶೇಷ ಪತ್ತೆಯಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ 28 ಮಂದಿ ಸಾವನ್ನಪ್ಪಿದ್ದರೆ ಎಂದು ತಿಳಿದು ಬಂದಿದೆ.
ಇಂಟರ್‌ಫ್ಯಾಕ್ಸ್ ಹಾಗೂ ಆರ್‌ಐಎ ಸುದ್ದಿ ಸಂಸ್ಥೆಗಳು ಈ ಬಗ್ಗೆ ಸುದ್ದಿ ಬಿತ್ತರಿಸಿದ್ದು ಮಂಗಳವಾರ ಬೆಳಿಗ್ಗೆ ರಷ್ಯಾದ ಪೂರ್ವ ವಲಯದ ಕಮ್ಚಟ್ಕಾ ಪೆನೆನ್ಸುಲಾದಿಂದ ಪಲಾನಾ ಕಡೆಗೆ ಹೊರಟಿದ್ದ ವಿಮಾನ ಕೆಳಗಿಳಿಯುವ ಪ್ರಯತ್ನದಲ್ಲಿದ್ದಾಗ
ಟ್ರಾಫಿಕ್ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಕಡಿದುಕೊಂಡು ಕಣ್ಮರೆಯಾಗಿತ್ತು. ನಂತರ ವಿಮಾನವು ಸಮುದ್ರದಲ್ಲಿ ಪತನವಾಗಿರುವುದಾಗಿ ತಿಳಿದುಬಂದಿತ್ತು. ಇದೀಗ ಪರಿಶೀಲನೆ ನಡೆಸಿದ್ದು, ವಿಮಾನದಲ್ಲಿದ್ದ 28 ಮಂದಿಯೂ ಸಾವನ್ನಪ್ಪಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
















