ಯುಕೆ ಚುನಾವಣೆ: ಭಾರತ ಮೂಲದ ರಿಷಿ ಸುನಕ್ ಅವರಿಗೆ ಸೋಲು,ಪ್ರಧಾನಿ ಹುದ್ದೆಗೆ ರಾಜೀನಾಮೆ.

Coastal Bulletin
ಯುಕೆ ಚುನಾವಣೆ: ಭಾರತ ಮೂಲದ ರಿಷಿ ಸುನಕ್ ಅವರಿಗೆ ಸೋಲು,ಪ್ರಧಾನಿ ಹುದ್ದೆಗೆ ರಾಜೀನಾಮೆ.

ಲಂಡನ್‌: ವಿಶ್ವದ ಗಮನ ಸೆಳೆದಿದ್ದ ಪ್ರಸಕ್ತ ಸಾಲಿನ ಸಾರ್ವತ್ರಿಕ ಚುನಾವಣೆಯಲ್ಲಿ, 14 ವರ್ಷಗಳ ಕಾಲ ಬ್ರಿಟನ್‌ನಲ್ಲಿ ಆಡಳಿತ ನಡೆಸಿದ ಕನ್ಸರ್ವೇಟಿವ್‌ ಪಕ್ಷ ಭಾರೀ ಸೋಲು ಕಂಡಿದೆ. ಪ್ರಚಂಡ ಜಯಭೇರಿ ಬಾರಿಸಿರುವ ಲೇಬರ್‌ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದರ ಬೆನ್ನಲ್ಲೇ ಬ್ರಿಟಿಷ್‌ ಪ್ರಧಾನಿ ರಿಷಿ ಸುನಕ್‌ ಅವರು ಸಾರ್ವತ್ರಿಕ ಚುನಾವಣೆಯ ಸೋಲನ್ನು ಒಪ್ಪಿಕೊಂಡು ಇಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ಕನ್ಸರ್ವೇಟಿವ್‌ ಪಕ್ಷವು 14 ವರ್ಷಗಳ ನಂತರ ಹೀನಾಯ ಸೋಲು ಕಂಡಿದೆ. ಕೀರ್‌ ಸ್ಟಾರ್ಮರ್‌ ನೇತೃತ್ವದ ಲೇಬರ್‌ ಪಕ್ಷವು ಐತಿಹಾಸಿಕ ಯುಕೆ ಚುನಾವಣೆಯಲ್ಲಿ ಪ್ರಚಂಡ ವಿಜಯ ಸಾಧಿಸಿದೆ. ಕನ್ಸರ್ವೇಟಿವ್‌ ನಾಯಕ ಮತ್ತು ಭಾರತೀಯ ಮೂಲದ ರಿಷಿ ಸುನಕ್‌ ಅವರ ರಾಜಕೀಯ ಭವಿಷ್ಯ ನಿರ್ಧರಿಸುವ ಸಾರ್ವತ್ರಿಕ ಚುನಾವಣೆಯೂ ಇದಾಗಿತ್ತು. 650 ಸ್ಥಾನಗಳ ಪೈಕಿ 326 ಸ್ಥಾನಗಳನ್ನು ಲೇಬರ್‌ ಪಕ್ಷ ಗೆದ್ದುಕೊಂಡಿದೆ. ಸಂಸತ್ತಿನಲ್ಲಿ ಬಹುಮತವನ್ನು ಹೊಂದಲು ಲೇಬರ್‌ ಪಕ್ಷವು ಸಾಕಷ್ಟು ಸ್ಥಾನಗಳನ್ನು ಗೆದ್ದಿದ್ದು ಸರ್ಕಾರವನ್ನು ರಚಿಸಲು ಮುಂದಿನ ಹಾದಿ ಸುಲಭವಾಗಿದೆ. ಸಂಸತ್ತಿನ ಕೆಳಮನೆ ಹೌಸ್‌‍ ಆಫ್‌ ಕಾಮನ್‌್ಸನಲ್ಲಿ ಲೇಬರ್‌ ಪಕ್ಷವು ಸುಮಾರು 160 ಸ್ಥಾನಗಳ ಬಹುಮತವನ್ನು ಹೊಂದಿದೆ.

2019ರಲ್ಲಿ ನಡೆದ ಬ್ರಿಟನ್‌ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್‌ ಪಕ್ಷ ಶೋಚನೀಯ ಸೋಲುಕಂಡಿತ್ತು. ಕಳೆದ 85 ವರ್ಷಗಳಲ್ಲಿಯೇ ಇಂತಹ ಸೋಲನ್ನು ಅದು ಕಂಡಿರಲಿಲ್ಲ. ಅದರ

ಮರು ವರ್ಷ ಲೇಬರ್‌ ಪಾರ್ಟಿಯ ನಾಯಕತ್ವವನ್ನು ವಹಿಸಿಕೊಂಡವರು ಕೀರ್‌ ಸ್ಟಾರ್ಮರ್‌. ಆಗಲೇ ಅವರು ಲೇಬರ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಪಣ ತೊಟ್ಟಿದ್ದರು.

Leave a Comment