ಹೈಟಿ ದೇಶದ ಅಧ್ಯಕ್ಷ ಜೊವೆನೆಲ್ ಮೊಯಿಸ್ (53) ಅವರನ್ನು ಅವರ ಖಾಸಗಿ ನಿವಾಸದಲ್ಲಿ ಸಶಸ್ತ್ರ ವ್ಯಕ್ತಿಗಳ ಗುಂಪು ಗುಂಡಿಕ್ಕಿ ಹತ್ಯೆ ಮಾಡಿದೆ. ಈ ವೇಳೆ ಮೊಯಿಸ್ ಅವರ ಪತ್ನಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತ ಮಾಹಿತಿ ನೀಡಿದ ಹಂಗಾಮಿ ಪ್ರಧಾನಿ ಕ್ಲೌಡೆ ಜೋಸೆಫ್ ತಾನು ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ, ಇದೊಂದು ದ್ವೇಷಪೂರಿತ, ಅಮಾನವೀಯ ಮತ್ತು ಬರ್ಬರ ಕೃತ್ಯ ಎಂದಿದ್ದಾರೆ.
ತಾನು ಈ ದೇಶದ ಉಸ್ತುವಾರಿ
ವಹಿಸಿಕೊಂಡಿದ್ದೇನೆ,ಸಾರ್ವಜನಿಕರು ಶಾಂತವಾಗಿರಬೇಕು,ಪೊಲೀಸ್ ಮತ್ತು ಸೇನೆಯು ಜನರ ಸುರಕ್ಷತೆಗೆ ಗಮನ ಹರಿಸಬೇಕು ಎಂದು ಕ್ಲೌಡೆ ಸೂಚಿಸಿದ್ದಾರೆ.
‘ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಯನ್ನು ಮಾತನಾಡುವ ವಿದೇಶಿಯರು ಅಧ್ಯಕ್ಷರನ್ನು ಅವರ ಮನೆಯಲ್ಲಿ ಹತ್ಯೆ ಮಾಡಿದ್ದಾರೆ’ ಎಂದು ಜೋಸೆಫ್ ಹೇಳಿದ್ದಾರೆ.
















