ಬಂಟ್ವಾಳ : ಸಜಿಪಮುನ್ನೂರು ಗ್ರಾಮದ ದಿವಂಗತ ಶರತ್ ಮಡಿವಾಳ ಅವರ ಸ್ಮಾರಕಕ್ಕೆ ಬುಧವಾರ ಪುಷ್ಪನಮನ ಸಲ್ಲಿಸಲಾಯಿತು.
ಕಳೆದ 4 ವರ್ಷಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರ್ಎಸ್ಎಸ್ ಸ್ವಯಂ ಸೇವಕ ಶರತ್ ಮಡಿವಾಳ ಇವರ ಸ್ಮಾರಕಕ್ಕೆ ಬುಧವಾರ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸಂಸ್ಮರಣೆ ಕಾರ್ಯಕ್ರಮ ನಡೆಯಿತು. ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮೃತರ ತಂದೆ ತನಿಯಪ್ಪ ಮಡಿವಾಳ, ಪ್ರಮುಖರಾದ ಶ್ರೀಕಾಂತ್ ಶೆಟ್ಟಿ, ಡೊಂಬಯ್ಶ ಅರಳ,
ರವೀಶ್ ಶೆಟ್ಟಿ ಕಾರ್ಕಳ, ಯಶವಂತ ನಗ್ರಿ, ಸುರೇಶ್ ಪೂಜಾರಿ ಸಾತರ್ಾವು,ಸುರೇಶ್ ಬಂಗೇರ ಸಜಿಪ ನಡು, ಪ್ರವೀಣ್ ಗಟ್ಟಿ ಮಾರ್ನಬೈಲು, ಸೀತಾರಾಮ ಅಗೋಳಿಬೆಟ್ಟು, ಪ್ರಶಾಂತ್ ಬೊಳ್ಳಾಯಿ, ನವೀನ್ ಅಂಚನ್, ಸುಂದರಿ, ಜಯಶಂಕರ ಬಾಸ್ರಿತಾಯ, ಚೇತನ್ ಕಡೇಶ್ವಾಲ್ಯ, ಸುಜಿತ್ ಕಲ್ಲಡ್ಕ , ಗೋಪಾಲ್ ಕೇಶವನಗರ, ಪುರುಷೋತ್ತಮ ವೀರಕಂಭ, ಕುಶಲ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.















