ಉತ್ತರ ಕೋರಿಯಾ: ನ್ಯೂಕ್ಲಿಯರ್ ದೇಶಕ್ಕೆ ಭಾರೀ ಆಹಾರ ಕ್ಷಾಮ ಎದುರಾಗಿದೆ. ಒಂದು ಪ್ಯಾಕೆಟ್ ಬ್ಲಾಕ್ ಟೀ ಪ್ಯಾಕೆಟ್ ಬೆಲೆ 5,167 ರೂಪಾಯಿ,ಒಂದು ಕೆಜಿ ಬಾಳೆಹಣ್ಣಿನ ಬೆಲೆ 3,336 ಮತ್ತು ಕಚ್ಚಾ ಜೋಳದ ಬೆಲೆ 205 ರೂ. ರೈತರು ಪ್ರತಿನಿತ್ಯ ಕನಿಷ್ಠ 2 ಲೀಟರ್ ನಷ್ಟು ತಮ್ಮ ಮೂತ್ರಗಳನ್ನು ಸಂಗ್ರಹಿಸಿ ರಸಗೊಬ್ಬರ ಉತ್ಪಾದಿಸಲು ನೆರವಾಗಲು ಆದೇಶ.
ಶಸ್ತ್ರಾಸ್ತ್ರ,ನ್ಯೂಕ್ಲಿಯರ್ ಶಕ್ತಿ ಪ್ರದರ್ಶಿಸಿ ಮಿಲಿಟರಿಯಲ್ಲಿ ಸೂಪರ್ ಪವರ್ ರಾಷ್ಟ್ರವಾಗಬೇಕು ಎಂದು ಕನಸು ಹೊತ್ತ ಉತ್ತರ ಕೊರಿಯಾದಲ್ಲಿ ಈಗ ಭಾರೀ ಆಹಾರ ಕ್ಷಾಮ ಎದುರಾಗಿದೆ. ಕ್ಷಾಮ ನೀಗಿಸಿಲು ಉ.ಕೊರಿಯಾ ಅಧ್ಯಕ್ಷ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸತತ ಸಭೆ
ನಡೆಸಿ ಆಹಾರ ಉತ್ಪನ್ನವೇ ದುಬಾರಿಯಾಗಿರುವ ಕಾರಣ ರಸಗೊಬ್ಬರ ಆಮದು ಅಥವಾ ಖರೀದಿ ಸಾಧ್ಯವಾಗುತ್ತಿಲ್ಲ ಹೀಗಾಗಿ ರೈತರು ಪ್ರತಿನಿತ್ಯ ಕನಿಷ್ಠ 2 ಲೀಟರ್ ನಷ್ಟು ತಮ್ಮ ಮೂತ್ರಗಳನ್ನು ಸಂಗ್ರಹಿಸಿ ರಸಗೊಬ್ಬರ ಉತ್ಪಾದಿಸಲು ನೆರವಾಗಬೇಕು ಎಂದು ಆದೇಶ ನೀಡಿದ್ದಾನೆ.














