ಬಿ ಸಿ ರೋಡ್ :ಸೆ.1ರಂದು ನೂತನ ಕೃಷಿಕ ಸಮಾಜ ಭವನದ ಉದ್ಘಾಟನೆ.ತಾಲೂಕಿನ ಕೃಷಿ ಸಖಿ ಮತ್ತು ಪಶು ಸಖಿಯರಿಗೆ ಅಭಿನಂದನಾ ಕಾರ್ಯಕ್ರಮ.

Coastal Bulletin
ಬಿ ಸಿ ರೋಡ್ :ಸೆ.1ರಂದು ನೂತನ ಕೃಷಿಕ ಸಮಾಜ ಭವನದ ಉದ್ಘಾಟನೆ.ತಾಲೂಕಿನ ಕೃಷಿ ಸಖಿ ಮತ್ತು ಪಶು ಸಖಿಯರಿಗೆ ಅಭಿನಂದನಾ ಕಾರ್ಯಕ್ರಮ.

ಬಂಟ್ವಾಳ: ತಾಲೂಕು ಕೃಷಿಕ ಸಮಾಜ ಬಂಟ್ವಾಳ ಇದರ ಅಶ್ರಯದಲ್ಲಿ ಬಿಸಿರೋಡಿನಲ್ಲಿ ಸುಮಾರು ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಕೃಷಿಕ ಸಮಾಜ ಭವನದ ಉದ್ಘಾಟನೆ ಸೆ.1ರಂದು ಸೋಮವಾರ ಬೆಳಿಗ್ಗೆ ನಡೆಯಲಿದೆ ಎಂದು ಬಂಟ್ವಾಳ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪದ್ಮರಾಜ ಬಲ್ಲಾಳ್ ಅವರು ಆ. 29ರಂದು ಬಿ ಸಿ ರೋಡ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೃಷಿಕ ಸಮಾಜ ಭವನವನ್ನು ಕೃಷಿ ಸಚಿವ ಚೆಲುವರಾಯ ಸ್ವಾಮಿ ಉದ್ಘಾಟಿಸಲಿದ್ದಾರೆ. ಸ್ಪೀಕರ್ ಯು.ಟಿ.ಖಾದರ್, ಸಚಿವ ದಿನೇಶ್ ಗುಂಡೂರಾವ್, ಬಂಟ್ವಾಳ ‌ಶಾಸಕ ರಾಜೇಶ್ ನಾಯ್ಕ್ ಸಹಿತ ಶಾಸಕರುಗಳು, ಮಾಜಿ ಸಚಿವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ‌ಅವರು ತಿಳಿಸಿದರು.

ಉದ್ಘಾಟನೆಯ ಬಳಿಕ ಬಿಸಿರೋಡಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕೃಷಿ ಇಲಾಖೆಯಿಂದ ನಡೆದ ಜಿಲ್ಲಾ

ಮಟ್ಟದ ಭತ್ತ ಬೆಳೆ ಸ್ಪರ್ಧೆಯಲ್ಲಿ ಕೃಷಿ ವಿಜೇತ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ, ತಾಲೂಕಿನ ಕೃಷಿ ಸಖಿ ಮತ್ತು ಪಶು ಸಖಿಯರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಕಟ್ಟಡ ಸಮಿತಿ ಅಧ್ಯಕ್ಷ ಪದ್ಮನಾಭ ರೈ, ಉಪಾಧ್ಯಕ್ಷ ಉಮ್ಮರ್ ಬಿ. ಕಾರ್ಯದರ್ಶಿ ರಮಾನಾಥ ವಿಟ್ಲ, ಕೋಶಾಧಿಕಾರಿ ಆಲ್ಬರ್ಟ್ ಮಿನೇಜಸ್,ಸದಸ್ಯರಾದ ಗಣೇಶ್ ಶೆಟ್ಟಿ ಗೋಳ್ತಮಜಲು, ರಮೇಶ್ ನೆಟ್ಲ, ಬದ್ರುದ್ದಿನ್ ಮಂಚಿ ಉಪಸ್ಥಿತರಿದ್ದರು.

Leave a Comment