ಬಂಟ್ವಾಳ :ಇಲ್ಲಿನ ಹಿಂದೂ ಜಾಗರಣಾ ವೇದಿಕೆ ಕಲಾಸಂಗಮ ನಡುಬೈಲ್ ಘಟಕದ ವತಿಯಿಂದ ವೃಕ್ಷ ಜಾಗರಣಾ ಕಾರ್ಯಕ್ರಮದ ಅಂಗವಾಗಿ ನಡುಬೈಲು -ಮಜಿ ಪರಿಸರದಲ್ಲಿ ಗಿಡ ನೆಡುವ ಕಾರ್ಯಕ್ರಮ ಆದಿತ್ಯವಾರ ಬೆಳಿಗ್ಗೆ ಹಿಂದೂ ಜಾಗರಣ ವೇದಿಕೆ ಇದರ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಶ್ರೀ ಜಗದೀಶ್ ಬಂಗೇರ ಹೊಳ್ಳರಬೈಲು ಇವರ ಉಪಸ್ಥಿತಿಯಲ್ಲಿ ನಡೆಯಿತು
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಾಕೃತಿಕ ಅಸಮತೋಲನದಿಂದ ಇಂದು ಹಲವಾರು ಸಮಸ್ಯೆ ಗಳು ಉದ್ಭವಿಸಿದೆ. ಭವಿಷ್ಯದಲ್ಲಿ ಆಮ್ಲಜನಕದ ಕೊರತೆ ಕೂಡ ಕಾಡಬಹುದು,ಇದಕ್ಕೆಲ್ಲ ಸದ್ಯದ ಪರಿಹಾರವೇ ಗಿಡ ಮರಗಳನ್ನು ನೆಟ್ಟು ಪರಿಸರವನ್ನು ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ ವಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಪುದುಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ನೆತ್ತರಕೆರೆ, ವೀಣಾ ಪದ್ಮನಾಭ,
ಹಿಂದೂ ಜಾಗರಣಾ ವೇದಿಕೆಯ ಯೋಗೀಶ್ ಕೋಟ್ಯಾನ್ ಕುಮ್ಡೇಲ್, ಹಿಂದು ಜಾಗರಣ ವೇದಿಕೆ ಮಾತೃ ಸುರಕ್ಷ ಸಂಯೋಜಕ್ ಶಿವಪ್ರಸಾದ್ ಧನುಪೂಜೆ ಜಗದೀಶ್ ಕಡೆಗೋಳಿ, ಮನೋಜ್ ಶರ್ಮಾ, ಪ್ರವೀಣ್ ಬೆಂಜನಪದವು, ಯಶವಂತ, ತುಂಬೆ ವಲಯ ಅಧ್ಯಕ್ಷರಾದವಿಜಯ್ ಕಜೆಕಂಡ ಕಿಶೋರ್ ರಾಮಲ್ ಕಟ್ಟೆ ದಿವಕರ ಕೊಡ್ಮಣ್ ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷರಾದ ಸುರೇಶ್ ನಡುಬೈಲು ಸ್ವಾಗತಿಸಿ ವಂದಿಸಿದರು.















