Coastal Bulletin

ಬಂಟ್ವಾಳ: ಅಕ್ಷರ ಜ್ಞಾನ ಬಹುದೊಡ್ಡ ಸಂಪತ್ತು ಆಗಿದ್ದರೂ ಹಸಿದ ಹೊಟ್ಟೆಗೆ ಅನ್ನ ನೀಡುವ ವಿದ್ಯಾಸಂಸ್ಥೆಯಾಗಿ ಶ್ರೀರಾಮ ವಿದ್ಯಾಸಂಸ್ಥೆಯು ಗುರುತಿಸಿಕೊಂಡಿದೆ ಎಂದು ರಾಜ್ಯ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಡಾ. ಸಿ. ಸೋಮಶೇಖರ ಹೇಳಿದ್ದಾರೆ.

ಇಲ್ಲಿನ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಶನಿವಾರ ನಡೆದ 'ಸೀತಾ ರಸೋಯಿ' 4 ಮಹಡಿಗಳ ಪಾಕಶಾಲಾ ಸಮುಚ್ಚಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಒಡಿಯೂರು ಕ್ಷೇತ್ರದ ಸಾಧ್ವಿ ಮಾತಾನಂದಮಯಿ ಆಶೀರ್ವನ ನೀಡಿ, ಧರ್ಮವೇ ನಮ್ಮ ದೇಶದ ಸತ್ವ ಎಂದರು.


ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಧರ್ಮದರ್ಶಿ ಡಾ. ಭೀಮೇಶ್ವರ ಜೋಶಿ ದಂಪತಿ ಶಾಲಾ ಸಂಸ್ಥಾಪಕ ಡಾ. ಕೆ.ಪ್ರಭಾಕರ ಭಟ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ

ಆಡಳಿತ ಸಮಿತಿ ಅಧ್ಯಕ್ಷ ಡಾ.ಚಂದ್ರಶೇಖರ ಶೆಟ್ಟಿ ಕೆರಾಡಿ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ, ಡಾ. ಕಮಲಾ ಪ್ರಭಾಕರ ಭಟ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಇದ್ದರು. 

ಇದೇ ವೇಳೆ ಪದವಿ ಪರೀಕ್ಷೆಯಲ್ಲಿ 9 ನೇ ರ್ಯಾಂಕ್ ಗಳಿಸಿದ ಆದಿತ್ಯ ಕೆ. ಮತ್ತು ಎಂಜಿನಿಯರ್ ರಾಮ್ಪ್ರಸಾದ್ ಇವರನ್ನು ಅಭಿನಂದಿಸಲಾಯಿತು. 

Leave a Comment