ಬಂಟ್ವಾಳ: ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ,ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಮಹಿಳಾ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ ವಿದ್ಯುತ್, ಪೆಟ್ರೋಲ್ ,ಡೀಸಲ್ ,ಗ್ಯಾಸ್ ಬೆಲೆ ಏರಿಕೆಯನ್ನು ಖಂಡಿಸಿ ಶನಿವಾರ ಬಿ.ಸಿ.ರೋಡಿನ ಮೇಲ್ಸ್ ತುವೆಯ ಕೆಳಭಾಹದಲ್ಲಿ ಪ್ರತಿಭಟನೆ ನಡೆಯಿತು.
ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ತೈಲ,ಗ್ಯಾಸ್ ,ವಿದ್ಯುತ್ ಬೆಲೆ ಏರಿಕೆಯಿಂದಾಗಿ ಪ್ರತಿಯೊಂದು ಜೀವನಾಶ್ಯಕ ವಸ್ತುಗಳ ಬೆಲೆ ಹೆಚ್ಚಾಗಿದ್ದು ಜನರ ಜೀವನ ದುಸ್ತರವಾಗಿದೆ.ಕೃಷಿಕರ ಬದುಕಿನಲ್ಲು ಏರುಪೇರಾಗಿದೆಯಲ್ಲದೆ ಕೂಲಿಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ. ಜನರ ಹಿತ ಕಾಪಾಡಬೇಕಾದ ಕೇಂದ್ರ ಸರಕಾರ ಜನರ ಬದುಕಿನಲ್ಲಿ ಚೆಲ್ಲಾವಾಡುತ್ತಿದೆ ಎಂದು ಟೀಕಾಪ್ರಹಾರಗೈದರು. ರಾಜ್ಯದಲ್ಲು ಭ್ರಷ್ಟಾಚಾರ ತಾಂಡವವಾಡುತ್ತಿದ್ದು,ತಮ್ಮ ವೈಫಲ್ಯವನ್ನು ಮರೆಮಾಚಲು ಧರ್ಮದ ಹೆಸರಿನಲ್ಲಿ ವಿಷಯಾಂತರಿಸಿ ಜನರ ದಿಕ್ಕು ತಪ್ಪಿಸಿತ್ತಿದೆ.ಕಾಂಗ್ರೆಸ್ ಬಡುವರಿಗೆ ಸಹಾಯ ಮಾಡಿದರೆ,ಬಿಜೆಪಿ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಅಪಾದಿಸಿದರು.
ಮಾಜಿ ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್ ಸಭೆಯನ್ನುದ್ದೇಶಿಸಿ
ಮಾತನಾಡಿದರು.ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸ್ತಾವಿಸಿ,ಸ್ವಾಗತಿಸಿದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ,ಜಿಪಂ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಪದ್ಮಶೇಖರ ಜೈನ್ ,ಮಾಜಿ ಎಪಿಎಂಸಿಅಧ್ಯಕ್ಷ ಪದ್ಮನಾಭ ರೈ,ತಮಾಜಿ ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ,ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೋರ,ಪುರಸಭಾ ಸದಸ್ಯರಾದ ವಾಸುಪೂಜಾರಿ,ಗಂಗಾಧರ, ಜನಾರ್ದನ ಚಂಡ್ತಿಮಾರ್,ಲೋಲಾಕ್ಷ ಶೆಟ್ಟಿ,ಪ್ರಮುಖರಾದ ಮಾಯಿಲಪ್ಪ ಸಾಲಿಯಾನ್,ವೆಂಕಪ್ಪ ಪೂಜಾರಿ, ಸುಭಾಶ್ಚಂದ್ರ ಶೆಟ್ಟಿ ಜೆಸಿಂತಾ ಡಿಸೋಜ,ಐಡಾ ಸುರೇಶ್ ,ವಿಲ್ಮಾ ಮೋರಸ್, ಬಿ.ಮೋಹನ್,ಅಬುಬಕ್ಕರ ಸಜಿಪ, ಬಾಲಕೃಷ್ಣ ಶೆಟ್ಟಿ ಕೊಡಾಜೆ,ಜಗನ್ನಾಥ ತುಂಬೆ ಮೊದಲಾದವರಿದ್ದರು. ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನವಾಜ್ ಬಡಕಬೈಲ್ ವಂದಿಸಿದರು.














