ಬಿ ಸಿ ರೋಡ್: ಇಂದಿನಿಂದ ಸಂಭ್ರಮದ 28ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಎರಡು ದಿನ ಕನ್ನಡ ಹಬ್ಬ, ಸಾಹಿತ್ಯ ಜಾತ್ರೆ,

Coastal Bulletin
ಬಿ ಸಿ ರೋಡ್: ಇಂದಿನಿಂದ ಸಂಭ್ರಮದ 28ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಎರಡು ದಿನ ಕನ್ನಡ ಹಬ್ಬ, ಸಾಹಿತ್ಯ ಜಾತ್ರೆ,

ಬಂಟ್ವಾಳ, ಮಾ. 25: ತಂತ್ರಜ್ಞಾನ-ಸಾಹಿತ್ಯ-ಸಹಬಾಳ್ವೆ ಎಂಬ ಧೈಯದೊಂದಿಗೆ ಹಿರಿಯ ಪತ್ರಕರ್ತ ಸಾಹಿತಿ ಚಿದಂಬರ ಬೈಕಂಪಾಡಿ ಅವರ ಸರ್ವಾಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮಾ. 26, 27 ಹಾಗೂ 28ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಅದ್ದೂರಿಯಾಗಿ ನಡೆಯಲಿದೆ.


ಮಾ. 26ರಂದು ಸಂಜೆ 4ಕ್ಕೆ ಬಿ.ಸಿ.ರೋಡಿನ ಕೈಕಂಬದ ಪೊಳಲಿ ದ್ವಾರದ ಬಳಿಯಿಂದ ಅದ್ದೂರಿಯ ಮೆರವಣಿಗೆಯ ಮೂಲಕ ಸಾಹಿತ್ಯ ಜಾತ್ರೆಗೆ ಚಾಲನೆ ದೊರೆಯಲಿದೆ.ಜಿಲ್ಲೆಯ ಜಾನಪದ ಸಂಸ್ಕೃತಿಯನ್ನು ಒಳಗೊಂಡ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಲಿವೆ. ಬಳಿಕ ಸಮ್ಮೇಳನ ಸಭಾಂಗಣದಲ್ಲಿ ಮೂರು ಮುತ್ತು ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ.


ಮಾ.27ರಂದು ಮಧ್ಯಾಹ್ನ 12ಕ್ಕೆ ಜಿಲ್ಲೆಯ ಭಾಷಾ ಸಾಮರಸ್ಯ ಗೋಷ್ಠಿ 1ಕ್ಕೆ ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, 2ಕೈಕೃತಿಗಳ ಲೋಕಾರ್ಪಣೆ, - 2.20ಕ್ಕೆ ಡಿವಿಜಿಯವರ ರಸಧಾರೆ ವಿಶೇಷ ಉಪನ್ಯಾಸ, 3 ಗಂಟೆಗೆ ದ.ಕ. ಜಿಲ್ಲೆಯ ಸಾಹಿತ್ಯ-ಸಂಸ್ಕೃತಿ ಗೋಷ್ಠಿ -3.50ಕ್ಕೆ ಕವಿಗೋಷ್ಠಿ ವಾಚನ-ಗಾಯನ-ಕುಂಚ, ಸಂಜೆ 5.30ಕ್ಕೆ ಅಗಲಿದ ಗಣ್ಯರಿಗೆ ನುಡಿನಮನ, 6ರಿಂದ ಮುಸ್ಲಿಂ ಸಾಂಪ್ರದಾಯಿಕ ದಫ್, ನಾಟ್ಯರಂಜಿನಿ, ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಲಿದೆ.


ಮಾ. 28ರಂದು ಬೆಳಗ್ಗೆ 8ರಿಂದ ಉದಯರಾಗ, ಡಾ| ಎಂ.ಎಸ್.ಭಟ್, ಎಂ.ಎನ್. ಮಹೇಶ ಬಳಗದಿಂದ ಶಾಸ್ತ್ರೀಯ ಸಂಗೀತ, 9ಕ್ಕೆ ಸಾಹಿತ್ಯ: ಹೊಸ ತಲೆಮಾರು ಗೋಷ್ಠಿ 10ಕ್ಕೆ ತಂತ್ರಜ್ಞಾನ-ಸಾಹಿತ್ಯ-ಸಹಬಾಳ್ವೆ ವಿಶೇಷ ಉಪನ್ಯಾಸ, 10.20ಕ್ಕೆ ಕಲ್ಮಂಜ ಭಿಡೆ ಸಹೋದರಿಯರಿಂದ ಭರತನಾಟ್ಯ, 11ಕ್ಕೆ ಕನ್ನಡ ಭಾಷೆಯಲ್ಲಿ ವೈದ್ಯ ವಿಜ್ಞಾನ ಹಾಗೂ ವೈದ್ಯಕೀಯ ಕಲಿಕೆ ವಿಶೇಷ ಉಪನ್ಯಾಸ, 11.20ಕ್ಕೆ ದ.ಕ.ಜಿಲ್ಲೆಯ ರಂಗಭೂಮಿ ಮತ್ತು ಬದುಕು; ಅವಲೋಕನ, 11.50ಕ್ಕೆ ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ 12.15ಕ್ಕೆ ಕನ್ನಡ ಮಾಧ್ಯಮ ಶಾಲೆಗಳ ವಾಸ್ತವ ಮತ್ತು ಭವಿಷ್ಯ ವಿಶೇಷ ಉಪನ್ಯಾಸ, 12.45ಕ್ಕೆ ಪ್ರೊ. ಮಧೂರು ಮೋಹನ ಕಲ್ಲೂರಾಯರಿಂದ ಗಮಕ-ಶ್ರೀಕೃಷ್ಣ ಭಕ್ತಿ, 1.30ಕ್ಕೆ ಬಂಟ್ವಾಳ ಎಸ್.ವಿ.ಎಸ್.ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 2ಕ್ಕೆ ಹಳೆಗನ್ನಡ ಸಾಹಿತ್ಯದ ರಸಧಾರೆ ವಿಶೇಷ ಉಪನ್ಯಾಸ, 2.30ಕ್ಕೆ

ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, 3ಕ್ಕೆ ಬಹಿರಂಗ ಅಧಿವೇಶನ, 3.30ಕ್ಕೆ ಪುತ್ತೂರು ಶ್ರೀದೇವಿ ನೃತ್ಯಾರಾಧನ ಕಲಾಕೇಂದ್ರದಿಂದ ನೃತ್ಯರಂಜಿನಿ ಪ್ರದರ್ಶನಗೊಳ್ಳಲಿದೆ. ಸಂಜೆ 5.30ಕ್ಕೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ತಂಡದಿಂದ ಕನ್ನಡ ಗಾನ ಗುಚ್ಛ 6.30ಕ್ಕೆ ವಿದುಷಿ ಶ್ರದ್ದಾ ಕಲ್ಲಡ್ಕ ಬಳಗದಿಂದ ನೃತ್ಯ ವೈಭವ, 7.30ಕ್ಕೆ ಶರಸೇತುಬಂಧ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.


ಮಾ. 27 ಹಾಗೂ 28ರಂದು ಸಮ್ಮೇಳನ ಸಭಾಂಗಣದ ಆವರಣದಲ್ಲಿ 30ಕ್ಕೂ ಅಧಿಕ ಪುಸ್ತಕ ಮಳಿಗೆಗಳು, ಕರಾವಳಿಯ ವಸ್ತುಸಂಗ್ರಹ ಪ್ರದರ್ಶನ, ಗುಡಿ ಕೈಗಾರಿಕೆ, ಕರಕುಶಲ, ಕೈ ಮಗ್ಗ ಆಹಾರ ಸಹಿತ ವಿವಿಧ ಮಳಿಗೆಗಳು, ವಿಶೇಷವಾಗಿ ಪಟ್ಟಾಂಗಕಟ್ಟೆಯಲ್ಲಿ ಅಜ್ಜಿಕಥೆ, ಉತ್ತರ ಹೇಳಿ ಪುಸ್ತಕ ಗೆಲ್ಲಿ ಸಮ್ಮೇಳನದ ವಿಶೇಷತೆಯಾಗಿರುತ್ತದೆ.

ಸಾಧಕರಿಗೆ ಸನ್ಮಾನ :

ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಸಾಧಕರಾದ ಡಾ. ಪಿ.ದಯಾನಂದ ಪೈ, ನಾಡೋಜ ಜಿ.ಶಂಕರ್, ಡಾ. ಕೆ.ಪ್ರಕಾಶ್‌ ಶೆಟ್ಟಿ ಬಂಜಾರ, ಕೆ.ಡಿ.ಶೆಟ್ಟಿ, ರವಿಶಂಕರ ಶೆಟ್ಟಿ ಬಡಾಜೆಗುತ್ತು, ಪಟ್ಲ ಸತೀಶ ಶೆಟ್ಟಿ, ಉದಯ ಸುವರ್ಣ, ವಿನೋದ್‌ ಶೆಣೈ, ಕಿಶೋರ್ ಆಳ್ವ ಅವರನ್ನು ಸನ್ಮಾನಿಸಲಾಗುವುದು.

ಸಾಧಕಸಿರಿ ಕನ್ನಡಸಿರಿ ಪ್ರಶಸ್ತಿ:

ಜಗನ್ನಾಥ ಚೌಟ ಬದಿಗುಡ್ಡೆ, ಎಸ್.ಆರ್. ಸತೀಶ್ಚಂದ್ರ, ಭುವನೇಶ್ ಪಚ್ಚಿನಡ್ಕ, ಜಗನ್ನಾಥ ಬಂಗೇರ ನಿರ್ಮಲ್ ಅವರಿಗೆ ಸಾಧಕಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪದ್ಮನಾಭ ಭಟ್ ಎಕ್ಕಾರು, ಕೆ.ಟಿ.ವಿಶ್ವನಾಥ, ಡಾ. ಈ.ಕೆ.ಎ.ಸಿದ್ದೀಕ್ ಅಡ್ಡರು, ಪುರಂದರ ಭಟ್, ರವೀಶ್ ಪಡುಮಲೆ, ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಸದಾನಂದ ನಾರಾವಿ, ಶಾಂತಾರಾಮ ಕುಂದ‌ರ್, ಕೆ.ರಾಜಾರಾಮ ಶರ್ಮ ಬೆಳಾಲು, ಕೇಶವ ಎ.ಕೊಯ್ದ, ಮುರಳೀದರ ವೈ.ಕೆ, ಅಬ್ದುಲ್ ಲತೀಫ್ ಗುರುಪುರ, ಗೋಪಾಲ ಅಂಚನ್ , ದೇವಿಪ್ರಸಾದ್‌ ಬೆಳ್ತಂಗಡಿ, ಲೂವಿಝಾ ಕುಟಿನ್ನೊ ಶಂಕರ ಐತಾಳ ಅವರಿಗೆ ಕನ್ನಡಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಗಡಿನಾಡು ಸೇವೆಗಾಗಿ ಡಾ. ಎಸ್.ಆ‌ರ್.ನರಹರಿ, ಸಂಸ್ಥೆಯಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಗೆ ಗೌರವ ಕಾರ್ಯಕ್ರಮ ನಡೆಯಲಿದೆ.



Leave a Comment