ಬಂಟ್ವಾಳ :ಶ್ರೀ ನಾಗಬ್ರಹ್ಮ ಸನ್ನಿಧಿ ಶ್ರೀ ಕೋರಬ್ಬು ದೈವಸ್ಥಾನ ಕುಮ್ಡೇಲ್, ಇಲ್ಲಿ ಶ್ರೀ ಕೋರಬ್ಬು ತನ್ನಿಮಾನಿಗ ಹಾಗೂ ಪರಿವಾರ ದೈವಗಳಿಗೆ 76ನೇ ವರ್ಷಾವಧಿ ನೇಮೋತ್ಸವ ಜ.03ನೇ ಶನಿವಾರದಿಂದ ಜ.05ರ ವರೆಗೆ ಜರುಗಲಿದೆ.
ಜ. 03ರಂದು ಶನಿವಾರ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ಪೌರೋಹಿತ್ಯದಲ್ಲಿ ಬೆಳಿಗ್ಗೆ ಪ್ರಾರ್ಥನೆ, ಪುಣ್ಯಾಹ, ಗಣಪತಿ ಹೋಮ, ಭಂಡಾರ ಏರಿಕೆ ಬಳಿಕ ದೀಪ ಪ್ರಜ್ವಲನೆ, ಶ್ರೀ ಲಕ್ಷ್ಮೀ ಸತ್ಯನಾರಾಯಣ ಪೂಜೆ,ನವಕಲಶ, ನವಕ ಕಲಶಾಭಿಷೇಕ, ಆಶ್ಲೇಷಾಬಲಿ, ನಾಗತಂಬಿಲ, ಅಶ್ವಥ ಪೂಜೆ, ಮಧ್ಯಾಹ್ನ 11.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆಯಾಗಲಿದೆ,11-45ರಿಂದ ಜಾಗದ ಗುಳಿಗ ದೈವಕ್ಕೆ ಗಗ್ಗರ ಸೇವೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 5-00ರಿಂದ ಶ್ರೀ ಶನಿಪೂಜೆ ರಾತ್ರಿ 8.00ರಿಂದ ಸಾರ್ವಜನಿಕ ಅನ್ನಸಂತರ್ಪಣೆ
ಬಳಿಕ ಇಂಚರ ಮೆಲೋಡಿಸ್ ತುಂಬೆ ಇದರ ತಂಡದವರಿಂದ ಭಕ್ತಿಗಾನ ಲಹರಿ ಕಾರ್ಯಕ್ರಮ ರಾತ್ರಿ ಗಂಟೆ 11ರಿಂದ ಶ್ರೀ ಕೋರಬ್ಬು ತನ್ನಿಮಾನಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ.
ಜ.04ನೇ ಆದಿತ್ಯವಾರ ಸಂಜೆ 6.30ಯಿಂದ ಭಜನಾ ಸಂಕೀರ್ತನೆ, ರಾತ್ರಿ ಗಂಟೆ 8-00 ಸಾರ್ವಜನಿಕ ಅನ್ನ ಸಂತರ್ಪಣೆ, ರಾತ್ರಿ ಗಂಟೆ 10-30ರಿಂದ ಚಾಮುಂಡಿ ಗುಳಿಗ ಹಾಗೂ ಗುಳಿಗ ಪಂಜುರ್ಲಿ ದೈವಗಳಿಗೆ ಗಗ್ಗರ ಸೇವೆ ನಡೆಯಲಿದೆ
ಜ 05ನೇ ಸೋಮವಾರ ಬೆಳಿಗ್ಗೆ ಗಂಟೆ 9-30ಕ್ಕೆ ಭಂಡಾರ ಇಳಿಯುವುದು ಎಂದು ಕ್ಷೇತ್ರದ ಆಡಳಿತ ಮುಕ್ತೇಸರರಾದ ಭಾಸ್ಕರ ಚೌಟ ಕುಮ್ಡೇಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










