ಮಂಗಳೂರು: ಹೈಕೋರ್ಟ್ ಕೊಟ್ಟ ಆದೇಶವನ್ನು ಉಲ್ಲಂಘಿಸಿ, ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ . ಅಲ್ಲದೇ ವಿದ್ಯಾರ್ಥಿನಿಯರು ಕೊರ್ಟ್ ನ ಆದೇಶಕ್ಕೆ ಬೆಲೆ ಕೊಡುತ್ತಿಲ್ಲ ಎಂದು ಯು.ಟಿ ಖಾದರ್ ವಿದ್ಯಾರ್ಥಿನಿಗಳ ವಿರುದ್ಧ ಕಿಡಿಕಾರಿದ್ದಾರೆ.
ಹಿಜಾಬ್ ವಿಷಯವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಲಿ, ಆಗ ಈ ದೇಶದ ಮಹತ್ವ ತಿಳಿಯುತ್ತದೆ ಎಂದರು.
ಹಿಜಾಬ್ ವಿಷಯದಲ್ಲಿ ವಿದ್ಯಾರ್ಥಿನಿಗಳು
ವಿಶ್ವವಿದ್ಯಾಲಯದ ವಿಸಿ ಅವರನ್ನು ಭೇಟಿ ಮಾಡಲಿ ಅಥವಾ ಡಿಸಿಯಲ್ಲಿ ಮಾತನಾಡಲಿ. ಅಲ್ಲಿಯೂ ನ್ಯಾಯ ಸಿಗದಿದ್ದರೆ, ಕೋರ್ಟ್ ಗೆ ಹೋಗಿ ನ್ಯಾಯ ಕೇಳಲಿ ಎಂದು ಹೇಳಿದರು.













