Coastal Bulletin

ಬಂಟ್ವಾಳ:ಜೆಸಿಐ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಬ್ರಹ್ಮರಕೊಟ್ಲು ಸರ್ಕಾರಿ ಹಿ. ಪ್ರಾ ಶಾಲೆಯಲ್ಲಿ ಜೆಸಿಐ ಉದ್ಯಾನವನ ಜೂನ್ 6ರಂದು ಸೋಮವಾರ ಲೋಕಾರ್ಪಣೆ ಗೊಂಡಿತು.

ಮಾಜಿ ಸಚಿವರಾದ ಬಿ ರಾಮನಾಥ ರೈ ಶಾಲೆಯ ಆವರಣದಲ್ಲಿ ನಿರ್ಮಿಸಿದ ಉದ್ಯಾನವನದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಉದ್ಯಾನವನದ ಉದ್ಘಾಟನೆಯನ್ನು ಮಾಡಿದರು.

ಜೆಸಿಐ ಉಪಾಧ್ಯಕ್ಷ ಜೆಸಿ ರಾಜೇಂದ್ರರವರು ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿ, ಗಣ್ಯರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಕಳ್ಳಿಗೆ ಗ್ರಾ ಪಂ ಅಧ್ಯಕ್ಷೆ ಯಶೋಧ ದಯಾನಂದ, ಪರಿಸರ ಪ್ರೇಮಿ ಜೀತ್ ಮಿಲನ್ ರೋಚ್,ಶಾಲಾ ಮುಖ್ಯ

ಶಿಕ್ಷಕಿ ಫ್ಲೋರಿನ್ ರೆಬೆಲ್ಲೋ. ಉಪಸ್ಥಿತರಿದ್ದರು.

ಉದ್ಯಾನವನ ನಿರ್ಮಿಸಲು ಸಹಕರಿಸಿದ ಜೆಸಿ ಲೋಕೇಶ್ ಸುವರ್ಣ, ಜೆಸಿ ರಾಜೇಂದ್ರ, ಜೆಸಿ ಸಂತೋಷ ಜೈನ್, ಜೆಸಿ ಮನೋಜ್, ಜೆಸಿ ಕಿರಣ್, ಜೆಸಿ ಉಮೇಶ್ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಚಂದ್ರಪ್ರಕಾಶ್ ಶೆಟ್ಟಿ, ಮಾದುಸೂದನ್ ಶೆಣೈ, ರವಿರಾಜ್ ಜೈನ್, ಉದಯಕುಮಾರ್ ಜ್ಯೋತಿಗುಡ್ಡೆ, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು. ಜೆಸಿ ರವೀನಾ ವಂದಿಸಿದರು.



Leave a Comment