Coastal Bulletin

ಬಂಟ್ವಾಳ : ನಲ್ಕೆಮಾರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಂದಲೇ ರಚಿತವಾದ ಮಾಸಪತ್ರಿಕೆ ಅಭ್ಯುದಯ ವು ಸೋಮವಾರ ಬಿಡುಗಡೆಗೊಂಡಿತು.

ಮುಖ್ಯ ಅತಿಥಿಯಾಗಿ ಪತ್ರಕರ್ತ ಮೌನೀಶ್ ವಿಶ್ವಕರ್ಮ ಮಾತನಾಡಿ ಶಾಲೆಯ ಮತ್ತು ಮಕ್ಕಳ ಏಳಿಗೆಗಾಗಿ ಅಭ್ಯುದಯ ಪತ್ರಿಕೆ ಲೋಕಾರ್ಪಣೆಗೊಂಡಿದೆ. ಮಕ್ಕಳ ಕಾಲಾವಧಿಯಲ್ಲಿ ಮನಸ್ಸಿಗೆ ತೋಚಿದ್ದನ್ನು ಅಕ್ಷರ ರೂಪದಲ್ಲಿ ಬರೆಯಬೇಕು. ಜೀವವಿಲ್ಲದ ವಸ್ತುಗಳು ಕೂಡಾ ಜೀವಂತವಾಗಿದೆ ಎಂದು ಕಲ್ಪಿಸಿ ಬರೆಯಲು ಆಭ್ಯಾಸ ಮಾಡಬೇಕೆಂದು ತಿಳಿಸಿದರು. ಶಾಲಾಬಿವ್ರದ್ದಿ ಸಮಿತಿ ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ ಅಭ್ಯುದಯ ಪತ್ರಿಕೆಯಿಂದ ಶಾಲೆಯಲ್ಲಿ ಆಗುವ ಚಟುವಟಿಕೆಗಳನ್ನು ಗ್ರಾಮ ಹಾಗೂ ತಾಲೂಕಿನ ಪ್ರತಿ ಮನೆಗೂ ತಿಳಿಸಲಾಗುವುದು

ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಶಾಲಾ ನಾಯಕಿ ತ್ರಿವೇಣಿ ವಹಿಸಿದ್ದರು.ವೇದಿಕೆಯಲ್ಲಿ ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಮುಖ್ಯೋಪಾಧ್ಯಾಯಿನಿ ಜ್ಯೋತಿ, ಶಾಲೆ ಸ್ಥಳದಾನಿ ರಾಮಪ್ಪ, ವಿದ್ಯಾರ್ಥಿಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ಯೋಗೀಶ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಯಾದವ ಅಗ್ರಬೈಲು ಉಪಸ್ಥಿತರಿದ್ದರು.

ಶಿಕ್ಷಕಿ ಸೌಮ್ಯ ಪ್ರಾರ್ಥನೆ ಮಾಡಿದರು. .ಶಿಕ್ಷಕಿ ರೇಖಾ ಕಾರ್ಯiಕ್ರಮ ನಿರೂಪಿಸಿದರು. ಶಿಕ್ಷಕಿ ಮೋಹಿನಿ ಧನ್ಯವಾದಗೈದರು. ಶಿಕ್ಷಕಿ, ಶಶಿಕಲಾ, ಮಮತಾ, ಶಿಕ್ಷಕ ಜಗನ್ನಾಥ ಕಾರ್ಯಕ್ರಮಕ್ಕೆ ಸಹಕರಿಸಿದ್ದರು

Leave a Comment