ಬಂಟ್ವಾಳ :ಲಯನ್ಸ್ ಕ್ಲಬ್ ಮಾಣಿ ಇದರ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವು ಸೋಮವಾರ ಬೆಳಗ್ಗೆ ಮಾಣಿ ಗ್ರಾಮದ ಹಳಿರ ಅಂಗನವಾಡಿ ಕೇಂದ್ರದಲ್ಲಿ ನಡೆಸಲಾಯಿತು
ಲಯನ್ಸ್ ಕ್ಲಬ್ ವತಿಯಿಂದ ಎಲ್ಲಾ ಮಕ್ಕಳಿಗೆ ಕುಳಿತು ಕೊಳ್ಳಲು ಚೈರ್ ಹಾಗೂ ಸಿಹಿ ತಿಂಡಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ
ಲಯನ್ ಡಾ. ಶ್ರೀನಾಥ್ ಆಳ್ವ, ಉಪಾಧ್ಯಕ್ಷರಾದ ಉಮೇಶ್ ಬರಿಮಾರು, ಕೋಶಾಧಿಕಾರಿ ರತ್ನಕರ ರೈ ಹಾಗೂ ಸದಸ್ಯರಾದ ನಾರಾಯಣ ಶೆಟ್ಟಿ, ಇಬ್ರಾಹಿಂ ಕೆ ಮಾಣಿ ಮೊದಲಾದವರು ಉಪಸ್ಥಿತರಿದ್ದರು.














