Coastal Bulletin

ಬಂಟ್ವಾಳ: ಬೈಕ್​ ಹಾರನ್​ ವಿಚಾರಕ್ಕೆ ನಡೆದ ಜಗಳ ಅತಿರೇಖಕ್ಕೆ ತಿರುಗಿ ಯುವಕನೊಬ್ಬನನ್ನು ಕೊಲೆ ಮಾಡಿದ ಘಟನೆ ಬಿ.ಸಿ.ರೋಡಿನ ಶಾಂತಿಯಂಗಡಿ ಸಮೀಪದ ತಲಪಾಡಿಯಲ್ಲಿ ನಡೆದಿದೆ.

ಮಹಮ್ಮದ್ ಆಸಿಫ್ ಮೃತಪಟ್ಟ ವ್ಯಕ್ತಿ. ಘಟನೆಗೆ ಸಂಬಂಧಿಸಿ ಆರೋಪಿಗಳಾದ ಮಹಮ್ಮದ್ ನೌಫೆಲ್, ಮಹಮ್ಮದ್ ನೌಸೀರ್​ ಎಂಬುವರನ್ನು ಬಂಟ್ವಾಳ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಸೋಮವಾರ ತಡರಾತ್ರಿ ಪೊನ್ನೋಡಿಯ ಹೋಟೆಲ್​ ಮುಂದೆ ಬೈಕ್​ ಹಾರನ್​ ವಿಚಾರವಾಗಿ ಆಸಿಫ್​ ಮತ್ತು ಆರೋಪಿಗಳ ಮಧ್ಯೆ ಗಲಾಟೆ ನಡೆದಿದೆ. 

ಈ ಸಂದರ್ಭದಲ್ಲಿ

ಆರೋಪಿಗಳಾದ ಮಹಮ್ಮದ್ ನೌಫೆಲ್, ಮಹಮ್ಮದ್ ನೌಸೀರ್​ ಆಸೀಫ್​ನನ್ನು ಹತ್ಯೆ ಮಾಡಿದ್ದಾರೆ. ಸಹಾಯಕ್ಕೆ ಬಂದ ಆಸೀಫ್​ ಸ್ನೇಹಿತ ನೌಫಲ್​ ಘಟನೆಯಲ್ಲಿ ಗಾಯಗೊಂಡಿದ್ದಾನೆ.

 ಈ ಕುರಿತು  ನೌಫಲ್ ಶಾಂತಿಯಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲಿಸ್​ ಇನ್ಸ್​ಪೆಕ್ಟರ್ ವಿವೇಕಾನಂದ, ಎಸ್.ಐ. ಅವಿನಾಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Comment