Coastal Bulletin

ಇನ್ಪೆಂಟ್ ಜೀಜಸ್ ಚರ್ಚಿನ ಧರ್ಮ ಗುರುಗಳಾದ ರೆವೆರೆಂಡ್ ಫಾದರ್ ವಲೇರಿಯನ್ ಡಿ. ಸೋಜಾ ಅವರು ರೋಟರಿ ಕ್ಲಬ್ ಮೊಡಂಕಾಪು ಇದರ ಗೌರವ ಸದಸ್ಯರು. ಸೌಮ್ಯ ಸ್ವಭಾವದ ತೂಗಿ ನುಡಿಯುವ ಮಾತುಗಾರ. ಸಾಮಾಜಿಕ ಕಳಕಳಿಯೊಂದಿಗೆ ಪರಿಸರ ಪ್ರೇಮಿ.

ಮೊಡಂಕಾಪು ಶಾಲೆಯಲ್ಲಿ ಬಾಲವಾಡಿಯಿಂದ 7ರ ವರೆಗೆ ಚರ್ಚಿನ ಪಕ್ಕದ ಶಾಲೆಯಲ್ಲಿ ಓದಿದ್ದೆ. ಗುರುಗಳು ವಾಸಿಸುವ ಮನೆಯ ಸಾಕಷ್ಟು ಪರಿಚಯ ನನಗಿದೆ. ನಮ್ಮ ಮೊಡಂಕಾಪು ರೋಟರಿ ಕ್ಲಬ್ಬಿನ ಪದಗ್ರಹಣ ತಾರೀಕು 02-07-2022 ಶನಿವಾರ ಇದ್ದುದ್ದರಿಂದ ಅಲ್ಲದೇ ಮುಂದಿನ ಅಧ್ಯಕ್ಷ ನಾನೇ ಆಗಿರುವುದ್ರಿಂದ ನಾನು ಹಾಗೂ ನಮ್ಮ ಸೇಕ್ರೆಟರಿ ರಹೀಮ್ ಅವರನ್ನು ಜೊತೆಗೂಡಿಸಿ ಅವರ ಮನೆಗೆ ಬೆಳಿಗ್ಗೆ 7ಘಂಟೆಗೆ ಹೋಗಿ ಇನ್ವಿಟೇಶನ್ ಕೊಟ್ಟಾಗ ಕಳೆದ ಒಂದೆರಡು ತಿಂಗಳ ಹಿಂದೆ ನೀರು ಇಂಗಿಸುವ ವಿಷಯದ ಬಗ್ಗೆ ಮಾತನಾಡಿರುವುದನ್ನು ನೆನಪಿಸಿದರು ಅಲ್ಲದೆ ಬಂಟ್ವಾಳ ತಾಲೂಕಿನ ಮುಂಡಾಜೆ ಎಂಬಲ್ಲಿ 03-07-2022 ಭಾನುವಾರ ಮಧ್ಯಾಹ್ನ 2ಘಂಟೆಯಿಂದ 5ರ ತನಕವಿದೆ ಅಂದರು. ಸರ್ ನಮ್ಮನ್ನು ಸ್ವಲ್ಪ ಬೇಗ ಬಿಡಿ ಕಾರಣ ನಮ್ಮ ಡಿಸ್ಟ್ರಿಕ್ಟ್ ಗವರ್ನರ್ ಪ್ರಕಾಶ್ ಕಾರಂತ್ ಅವರ ಪದಗ್ರಹಣ ಸಮಾರಂಭ ಇದೆ ಅಂದಾಗ ನೀವು 4 ಘಂಟೆಗೆ ಹೋಗಿಬಿಡಿ ಅಂದರು. ನನ್ನ ಪದಗ್ರಹಣದ ಮೊದಲನೇ ಕಾರ್ಯಕ್ರಮವನ್ನು ಬಿಟ್ಟುಕೊಡಲಾಗದೆ ಅಲ್ಲದೆ ನೀರು ಇಂಗಿಸುವ ಬಗ್ಗೆ ಮಾಹಿತಿಯನ್ನು ಪಡೆಯುವ ನಿಟ್ಟಿನಲ್ಲಿ ನಾನು ಮಗ ಹಾಗೂ ರಹೀಮ್ ಮಧ್ಯಾಹ್ನ 2ಘಂಟೆಗೆ ರೆಡಿಯಾಗಲು ನಿರ್ಧರಿಸಿದೆವು. ನಿನ್ನೆ ತಾನೇ ನನ್ನ ಪದಗ್ರಹಣ ಕಾರ್ಯಕ್ರಮ ನಡೆದಿರುವುದ್ರಿಂದ ನನ್ನ ಎರಡೂ ಸಭಾಂಗಣ ಆಸ್ತವ್ಯಸ್ತವಾಗಿತ್ತು. ಎಲ್ಲಾ ಜೋಡಿಸಿ ಸರಿಯಾಗಿಸಿದಾಗ ಸಮಯ ಓಡಿಯೇ ಹೋಗಿತ್ತು ಹೊಟ್ಟೆಯ ತಾಳದ ಸದ್ದಡಗಿಸಿ ಶ್ರಮದಾನಕ್ಕೆ ಬೇಕಾದ ಬಟ್ಟೆಯನ್ನು ತೊಟ್ಟು ಹಾರೆ ಪಿಕ್ಕಾಸಿನೊಂದಿಗೆ ಕಾಯುತ್ತಿದ್ದಾಗ ಧರ್ಮ ಗುರುಗಳು ಬಂದೇ ಬಿಟ್ಟರು. ಅವರನ್ನು ಹಿಂಬಾಲಿಸುತ್ತಾ ಮಗ , ಹಾಗೂ ರಹೀಮ್ ಕುಳಿತ ಕಾರು ಹೊರಟು ಮುಟ್ಟಿದ್ದು ಒಂದು ಕಾಡಿನೊಳಗೆ. ಅಲ್ಲಿ ರೈತಾಪಿ ಬಂಧುಗಳೆಲ್ಲ ಬಂದು ಸೇರಿದ್ದರು. ಹೆಚ್ಚಿನವರೆಲ್ಲ ನನ್ನ ಬಾಲ್ಯದ ಸ್ನೇಹಿತರು ಹಾಗೂ ನನ್ನೊಡನೆ ಕಲಿತವರಾಗಿದ್ದರು. ಪರಸ್ಪರ ಮುಖಗಳ

ಪರಿಚಯವಿಲ್ಲದಿದ್ದರೂ ಅದೇನೋ ಭಾವ ಮನದ ಕೋಶಗಳ ತೆರೆದು ಸ್ನೇಹಿತರ ಮುಖಗಳ ಹೊರ ತಂದು ಪರಿಚಯಿಸಿದಾಗ ಹೊಸ ಹುರುಪು ಹೊಸ ಶಕ್ತಿ ಈ 62- 63ರರ ಪ್ರಾಯದಲ್ಲಿ. ನಾನು, ಮಗ, ಮತ್ತು 3 ಜನ ಫಾದರ್ ಹಾಗೂ ನನ್ನ ಬಾಲ್ಯದ ಸ್ನೇಹಿತರು ಜೊತೆಗೆ ರಹೀಮ್ ಸಾರ್. ಪ್ರಾಯದಲ್ಲಿ ಹಿರಿಯರಾದುದ್ದರಿಂದ ನಾವು ಕೆಲಸ ಕೊಡುತ್ತಿರಲಿಲ್ಲ. ಆದ್ರೆ ಎಲ್ಲಿಗೆ ಹೋಗ್ಬೇಕಾದರೂ ಮೊದಲಿಗೆ ಬಂದು ಮಾನಸಿಕವಾಗಿ ನಮ್ಮನ್ನು ತಯಾರು ಮಾಡುತ್ತಿದ್ದರು.

ಅದೊಂದು ಗುಡ್ಡ. ಮಧ್ಯ ಭಾಗದಲ್ಲಿ ಸುಮಾರು 12ಅಡಿ ಉದ್ದ 3ಅಡಿ ಅಗಲ 3ರಿಂದ 4 ಅಡಿ ಆಳದ ಕಂದಕವನ್ನು ಮಾಡಿ ಕಾಡಿನಲ್ಲಿ ಬಿದ್ದ ತರಗೆಲೆಗಳನ್ನು ತುಂಬಿಸುವುದು. ನನಗೆ ಇದೆಲ್ಲಾ ಹೊಸದು ಆದರೇ ಅಲ್ಲಿ ಕೃಷಿಕರಾಗಿದ್ದ ನನ್ನ ಸ್ನೇಹಿತರು ನನಗೆ ಗುರುಗಳಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಬಾಲ್ಯದ ನೆನಪುಗಳನ್ನು ಎಲ್ಲರಲ್ಲೂ ಮಾತಿನಲ್ಲಿ ತೊಡಗಿದ ನಮಗೆ ಅಷ್ಟೊಂದು ಆಳದ ಕಂದಕ ಏರ್ಪಟ್ಟದ್ದೇ ತಿಳಿಯಲಿಲ್ಲ. ಅಲ್ಲದೆ 3 ಧರ್ಮ ಗುರುಗಳೊಂದಿಗಿನ ಕೆಲಸ ಯಾಕೋ ತುಂಬಾ ಹಿತವಾಗಿತ್ತು. ನನಗೆ ಕೊಂಕಣಿ ಬಾಷೆ ಮಾತನಾಡಲು ಗೊತ್ತಿದ್ದದ್ದರಿಂದ ನಾನು ಅವರಲ್ಲಿ ಒಬ್ಬನ್ನಾಗಿದ್ದೆ. ತರಗೆಲೆ ತುಂಬುವ ವಿಷಯ ಕುತೂಹಲವಾದಾಗ ಇದು ಯಾಕೆ ಅಂತ ಅಲ್ಪೊನ್ಸ ಹತ್ತಿರ ಕೇಳಿದಾಗ ಒಂದನೆಯದು ಗೊಬ್ಬರವಾಗಿ ಪರಿವರ್ತನೆ ಮತ್ತು ಪ್ರಾಣಿಗಳು ಅದರೊಳಗೆ ಬೀಳದಂತೆ ಒಂದು ಸಣ್ಣ ತಡೆ. ಹೀಗೊಂದು ಶಾಸ್ತ್ರೀಯ ರೀತಿಯಲ್ಲಿ ನೀರು ಇಂಗಿಸುವ ಕ್ರಮಕ್ಕೆ ಸಾಕ್ಷಿಯಾದಾಗ ಸಮಯ ಸಂಜೆಯ ಹೊತ್ತು 4ನ್ನು ದಾಟಿತ್ತು. ಎಲ್ಲರಲ್ಲೂ ಕ್ಷಮೆ ಯಾಚಿಸುತ್ತಾ ಬೆಂಜನಪದವಿನ ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ 5:30 ನಡೆಯಬೇಕಾಗಿದ್ದ ಡಿಸ್ಟ್ರಿಕ್ಟ್ ಗವರ್ನರ್ ಪದಗ್ರಹಣಕ್ಕೆ ಸಾಕ್ಷಿಯಾಗಲು ತೇರಾಳಬೇಕಾಗಿತ್ತು. ಮುಂದೆ ಇನ್ನೊಂದು ಪ್ರಾಜೇಕ್ಟ್ ಜೊತೆಗೆ ನಿಮ್ಮೊಂದಿಗೆ ಬರುತ್ತೇನೆ.

ಡಾ ಗೋವರ್ಧನ್ ರಾವ್, ಅಧ್ಯಕ್ಷರು, ರೋಟರಿ ಕ್ಲಬ್ ಮೊಡಂಕಾಪು, ಬಿ ಸಿ ರೋಡ್.

Leave a Comment