ಕರಿಯಂಗಳ:ಪಂಚ ಗ್ಯಾರಂಟಿ ಯೋಜನೆಯ ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ. ಪಂಚ ಗ್ಯಾರಂಟಿಯಿಂದ ಬಡವರಿಗೆ ಸ್ವಾಭಿಮಾನದ ಜೀವನ :ರಮಾನಾಥ ರೈ

Coastal Bulletin
ಕರಿಯಂಗಳ:ಪಂಚ ಗ್ಯಾರಂಟಿ ಯೋಜನೆಯ ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ. ಪಂಚ ಗ್ಯಾರಂಟಿಯಿಂದ ಬಡವರಿಗೆ ಸ್ವಾಭಿಮಾನದ ಜೀವನ :ರಮಾನಾಥ ರೈ

ಬಂಟ್ವಾಳ : ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ವತಿಯಿಂದ ಕರಿಯಂಗಳ ಗ್ರಾ.ಪಂ ವಠಾರದಲ್ಲಿ ಅಮ್ಟಾಡಿ,ಅಮ್ಮುಂಜೆ,ಕರಿಯಂಗಳ, ಬಡಗಬೆಳ್ಳೂರು, ಕಳ್ಳಿಗೆ, ತುಂಬೆ,ಪುದು, ಮೇರಮಜಲು ಗ್ರಾಮಗಳನ್ನು ಒಳಗೊಂಡು ನೋಂದಾವಣೆ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಭಾರತದ ಮಾಜಿ ಪ್ರಧಾನಿಗಳಾದ ಡಾ.ಮನಮೋಹನ್ ಸಿಂಗ್ ರವರ ನಿಧನಕ್ಕೆ ಮೌನ ಪ್ರಾರ್ಥನೆ ಮುಖಾಂತರ ಅವರ ಆತ್ಮಕ್ಕೆ ಚಿರಶಾಂತಿ ಕೊರಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬಿ.ರಮಾನಾಥ ರೈ ರವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ಬಡವರ ಜೀವನ ಮಟ್ಟ ಸುಧಾರಿಸುವ ಉದ್ದೇಶದಿಂದ ಪಂಚ ಗ್ಯಾರಂಟಿ ಜಾರಿ ಮಾಡಿದೆ ಇದರಿಂದಾಗಿ ಬಡವರ ಕಲ್ಯಾಣ ಹಾಗೂ ಸ್ವಾಭಿಮಾನದ ಜೀವನ ಸಾಗಿಸಲು ಪೂರಕವಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾಡಿದ ಸಮಿತಿಯ

ಅದ್ಯಕ್ಷರಾದ ಜಯಂತಿ ವಿ.ಪೂಜಾರಿ ಜಾತಿ,ಧರ್ಮ,ಭಾಷೆಯ ತರತಮ್ಯ ಇಲ್ಲದೆ ಎಲ್ಲಾ ವರ್ಗದವರ ಕಲ್ಯಾಣ ಸಾಧಿಸಲು ಪಂಚ ಗ್ಯಾರಂಟಿ ಯಿಂದ ಸಾದ್ಯವಾಗಿದೆ ಸಮಿತಿಯ ಸರ್ವಸದಸ್ಯರ ಹಾಗೂ ಅಧಿಕಾರಿ ವರ್ಗದವರ ಪ್ರೋತ್ಸಾಹದಿಂದ ಶಿಬಿರ ಯಶಸ್ವಿಯಾಗಿ ನಡೆಯಲು ಸಾದ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕುಮಾರ್ ,ಮಾಜಿ ತಾ.ಉಪದ್ಯಕ್ಷರಾದ ಅಬ್ಬಸ್ ಆಲಿ ಶುಭಹಾರೈಸಿದರು.ಈ ಸಂದರ್ಭದಲ್ಲಿ ಕರಿಯಂಗಳ ಗ್ರಾ.ಪಂ ಅದ್ಯಕ್ಷರಾದ ರಾಧಾ ಲೋಕೇಶ್, ಉಪಾದ್ಯಕ್ಷರಾದ ರಾಜು ಕೊಟ್ಯಾನ್,ಚಂದ್ರಹಾಸ ಪಲ್ಲಿಪಾಡಿ,ಚಂದ್ರಶೇಖರ್ ಭಂಡಾರಿ,ಇಬ್ರಾಹಿಂ ನವಾಜ್,ವಿಣಾ ಆಚಾರಿ,ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ರಶ್ಮಿ, ವಸಂತಿ, ನಯನ ಮತ್ತಿತರರು ಉಪಸ್ಥರಿದ್ದರು.

Leave a Comment