ನೆತ್ತರಕೆರೆ :ಸರ್ಕಾರಿ ಶಾಲೆಯಲ್ಲಿ ಉಚಿತ ಕಣ್ಣು ಚಿಕಿತ್ಸಾ ಶಿಬಿರ.

Coastal Bulletin
ನೆತ್ತರಕೆರೆ :ಸರ್ಕಾರಿ ಶಾಲೆಯಲ್ಲಿ ಉಚಿತ ಕಣ್ಣು ಚಿಕಿತ್ಸಾ ಶಿಬಿರ.

ಬಂಟ್ವಾಳ :ರೋಟರಿ ಕ್ಲಬ್ ಬಂಟ್ವಾಳ, ನವೋದಯ ಮಿತ್ರ ಕಲಾ ವೃಂದ (ರಿ), ನೇತ್ರಾವತಿ ಮಾತೃ ಮಂಡಳಿ ಹಾಗೂ ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಕಳ್ಳಿಗೆ ನೆತ್ತರಕೆರೆ ಇದರ ಅಶ್ರಯದಲ್ಲಿ, ದ.ಕ.ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಹಾಗೂ ಅಶ್ವಿನ್ ಅಪ್ಟಿಕಲ್ಸ್ ಇವರ ಸಹಯೋಗದಲ್ಲಿ ಉಚಿತ ಕಣ್ಣು ಪರೀಕ್ಷಾ ಶಿಬಿರವು ಅ 30ರಂದು ಬುಧವಾರ ನೆತ್ತರಕೆರೆ ಶಾಲೆಯಲ್ಲಿ ನಡೆಯಿತು.

ಶಿಬಿರವನ್ನು ನೇತ್ರ ತಜ್ಞರಾದ ಶಾಂತ ರಾಜ್ ದೀಪ ಬೆಳಗಿಸಿ ಉದ್ಘಾಟಿಸಿದರು,ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ದಾಮೋದರ ನೆತ್ತರಕೆರೆ , ಪುದು ಗ್ರಾ ಪಂ ಸದಸ್ಯ

ಸುಬ್ರಹ್ಮಣ್ಯ ರಾವ್, ನವೋದಯ ಮಿತ್ರ ಕಲಾ ವೃಂದದ ಮಾಜಿ ಅಧ್ಯಕ್ಷ ಸುರೇಶ್ ಭಂಡಾರಿ ಅರ್ಜಿ, ಶಾಲಾ ಮುಖ್ಯ ಶಿಕ್ಷಕಿ ಸಿಲ್ವಿಯ ಬ್ರೇಗ್ಸ್ ಉಪಸ್ಥಿತರಿದ್ದರು.

ಸ್ಥಳೀಯ ಗ್ರಾಮಸ್ಥರು,ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.

Leave a Comment