ಬಂಟ್ವಾಳ : ತುಂಬೆ ಗ್ರಾಮದಲ್ಲಿ ಡೆಂಗ್ಯೂ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಅದನ್ನು ನಿಯಂತ್ರಿಸುವ ಬಗ್ಗೆ ತುರ್ತು ಸಭೆಯು ಜು.30ರಂದು ತುಂಬೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪೂರ್ವಾಹ್ನ 11.00 ಗಂಟೆಗೆ ನಡೆಸಲಾಯಿತು.
ಈ ಸಭೆಯಲ್ಲಿ ತುಂಬೆ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪುದು ವೈದ್ಯಾಧಿಕಾರಿ, ಪುದು ಸುರಕ್ಷಾ ಅಧಿಕಾರಿ, ಗ್ರಾ.ಪಂ
ಲೆಕ್ಕ ಸಹಾಯಕರು ಅಂಗನವಾಡಿ ಕಾರ್ಯಕರ್ತೆರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಎಮ್.ಬಿ.ಕೆ ಮತ್ತು ತುಂಬೆ ಗ್ರಾಮದ ದ ಗ್ರಾಮಸ್ಥರು ಭಾಗವಹಿಸಿದ್ದರು.















