ತುಂಬೆ: ಪದವಿ ಪೂರ್ವ ಕಾಲೇಜಿನಲ್ಲಿ ಪರಿಣಾಮಕಾರಿ ಆಂಗ್ಲ ಭಾಷಾ ಬೋಧನೆ ಬಗ್ಗೆ ಕಾರ್ಯಾಗಾರ.

Coastal Bulletin
ತುಂಬೆ: ಪದವಿ ಪೂರ್ವ ಕಾಲೇಜಿನಲ್ಲಿ ಪರಿಣಾಮಕಾರಿ ಆಂಗ್ಲ ಭಾಷಾ ಬೋಧನೆ ಬಗ್ಗೆ ಕಾರ್ಯಾಗಾರ.

ಬಂಟ್ವಾಳ :ಆಂಗ್ಲ ಭಾಷೆಯನ್ನು ಯಾವಾಗ ಅತ್ಯಂತ ಕ್ಲಿಷ್ಟ ಕರವೆಂದು ಹೇಳಿ ಬೋಧಿಸಲಾಗುತ್ತದೋ, ಆಗ ವಿದ್ಯಾರ್ಥಿಗಳಿಗೂ ಅದು ಕಷ್ಟದಾಯಕವಾದ ಭಾಷೆ ಅಥವಾ ವಿಷಯವಾಗುತ್ತದೆ. ನಿರಂತರ ಅಭ್ಯಾಸ, ಶಬ್ಧ ಭಂಡಾರಗಳ ಸಂಗ್ರಹ, ಎಲ್ಲಿ ಯಾವಾಗ, ಯಾವ ಪದಗಳನ್ನು ಜಾಣತನ ಹಾಗೂ ಜಾಗರೂಕತೆಯಿಂದ ಬಳಸಲು ನಾವು ಪ್ರಾರಂಭಿಸುತ್ತೇವೆಯೋ ಆಗ ಇಂಗ್ಲೀಷ್ ಎಂಬುದು ನೀರು ಕುಡಿದಷ್ಟು ಸುಲಭವಾಗುತ್ತದೆ. ಈ ರೀತಿಯಾಗಿ ವಿದ್ಯಾರ್ಥಿಗಳಿಗೂ ನಾವು ಬೋಧಿಸುವ ಅನಿವಾರ್ಯತೆ ನಮ್ಮ ಮುಂದಿದೆ ಎಂಬುದಾಗಿ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ, ಸಂಪನ್ಮೂಲ ವ್ಯಕ್ತಿ ಅಬ್ದುಲ್ ಸಮದ್ ಹೇಳಿದರು.

ಅವರು ಮುಹಿಯುದ್ದೀನ್ ಶಿಕ್ಷಣ ಸಮಸ್ತೆಗಳ ಅಡಿಯಲ್ಲಿ ಶಿಕ್ಷಕ/ಶಿಕ್ಷಕಿಯರು,ಉಪನ್ಯಾಸಕ/ ಉಪನ್ಯಾಸಕಿಯರಿಗಾಗಿ ಏರ್ಪಡಿಸಿದ್ದ ಪರಿಣಾಮಕಾರಿಯಾಗಿ ಆಂಗ್ಲ ಭಾಷಾ ಬೋಧನೆ ಹೇಗೆ ಸಾಧ್ಯ ಎನ್ನುವುದರ ಕುರಿತು ಏರ್ಪಡಿಸಿದ್ದ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ತುಂಬೆ ಪದವಿ –ಪೂರ್ವ ಕಾಲೇಜಿನ ಪ್ರಾಂಶುಪಾಲ ವಿ. ಸುಬ್ರಹ್ಮಣ್ಯ ಭಟ್, ಇಂಗ್ಲೀಷ್ ಭಾಷಾ ಕಲಿಕೆ ಇವತ್ತು ಜಾಗತಿಕ ಮಟ್ಟದಲ್ಲಿ ಅನಿವಾರ್ಯ ಮತ್ತು ಅಗತ್ಯ ಎನ್ನುವುದನ್ನು ಪ್ರಸ್ತಾವಿಸಿ

ಸ್ವಾಗತಿಸಿದರು. 

ತುಂಬೆ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಕೆ., ತುಂಬೆ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಮಲ್ಲಿಕಾ ಶೆಟ್ಟಿ, ಕಚೇರಿ ಅಧೀಕ್ಷಕ ಬಿ. ಅಬ್ದುಲ್ ಕಬೀರ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಹ ಶಿಕ್ಷಕ ಸೌಮ್ಯ ವಂದಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಮ್ ಜೆ.ನಾಯಕ್ ಕೆ. ನಿರೂಪಿಸಿದರು.

Leave a Comment