ಬಂಟ್ವಾಳ: ತಾಲೂಕಿನ ಮೇರಮಜಲು ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಗ್ರಾಮ ಸಭೆಯು ಡಿ. 30ರಂದು ಮಂಗಳವಾರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಮಹಿಳಾ ಸಾಂತ್ವನ ಕೇಂದ್ರ ಬಂಟ್ವಾಳ ಇಲ್ಲಿನ ಪ್ರಶಾಂತ್ ಮಕ್ಕಳ ಹಕ್ಕು ಮತ್ತು ರಕ್ಷಣೆಯ ಕುರಿತು ಮಾಹಿತಿ ನೀಡಿದರು. ಶಾಲಾ ಮಕ್ಕಳು ಸಮಸ್ಯೆಗಳನ್ನು ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮೇರಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ನಾಯ್ಗ ಕೊಡ್ಮಾಣ್ ಕೊಡಿ, ಸದಸ್ಯರಾದ ಪದ್ಮನಾಭ ಶೆಟ್ಟಿ ಕೊಟ್ಟಿಂಜ, ವೃಂದಾ, ಜಯಶ್ರೀ ಕರ್ಕೇರಾ,ಪ್ರಾನ್ಸಿಸ್ ಮೆಂಡೊನ್ಸಾ , ಗುಣವತಿ ಹಿರಿಯ ಮೇಲ್ವಿಚಾರಕಿ ಮಹಿಳಾ ಮತ್ತು ಮಕ್ಕಳ ಇಲಾಖೆ ಬಂಟ್ವಾಳ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವುಲಾಲ್
ಚವ್ಹಾಣ್, ಶಾಲಾ ಅಧ್ಯಾಪಕರುಗಳಾದ ಲವೀನಾ ಡಿಸೋಜ, ರಶ್ಮಿತಾ, ರೋಜ್ ಎಂ.ಸಿ ಹಾಗೂ ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ಶಾಲಾ ಮಕ್ಕಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಕೊಡ್ಮಾಣ್ ಪ್ರೌಡ್ ಶಾಲೆಯ ವಿಧ್ಯಾರ್ಥಿ ಹರ್ಷಿತ್ ಸಭೆಯ ಅಧ್ಯಕ್ಷ ಹಾಗೂ ದಕಜಿಪಂ ಹಿ.ಪ್ರಾ. ಶಾಲೆ ಅಬ್ಬೆಟ್ಟು ವಿಧ್ಯಾರ್ಥಿನಿ ರಶೀಕಾ ಉಪಾಧ್ಯಕ್ಷರಾಗಿ ಸಭೆ ನಡೆಸಿದರು.ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ,ಪ್ರೇಮಕಲಾ ಸಿ ಹೆಚ್ ಒ ಮೇರಮಜಲು ಉಪಸ್ಥಿತರಿದ್ದರು, ಕೊಡ್ಮಾಣ್ ಶಾಲೆಯ ವಿದ್ಯಾರ್ಥಿನಿ ರಿನೀಶಾ ವಂದಿಸಿದರು.










