ಬಂಟ್ವಾಳ :ಆಶೀರ್ವಾದ್ ಸೇವಾ ಸಂಘ ತುಂಬೆ ಇದರ ಸದಸ್ಯರಿಗಾಗಿ ನಡೆದ ಆಶೀರ್ವಾದ್ ಪ್ರೀಮಿಯರ್ ಲೀಗ್ ಸೀಸನ್-3 ಪಂದ್ಯದಲ್ಲಿ ಆಶೀರ್ವಾದ್ ವಾರಿಯರ್ಸ್ ತುಂಬೆ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಆಶೀರ್ವಾದ್ ರೈಸಿಂಗ್ ಸ್ಟಾರ್ ರನ್ನರ್ಸ್ ರನ್ನರ್ಸ್ ಪ್ರಶಸ್ತಿಯನ್ನು ಪಡೆಯಿತು.
ಬೊಳ್ಳಾರಿ ಕ್ರೀಡಾಂಗಣದಲ್ಲಿ ನಡೆದ 5 ತಂಡಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸುಮಾರು 100ಕ್ಕೂ ಅಧಿಕ ಸಂಘದ ಸದಸ್ಯರು ಭಾಗವಹಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಯಿತು.
ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ, ಬಂಟ್ವಾಳ ತಾ ಪಂ ಮಾಜಿ ಸದಸ್ಯ ಗಣೇಶ್ ಸುವರ್ಣ ತುಂಬೆ, ಶ್ರೀ ಶಾರದಾ
ಪೂಜಾ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಘವ ಬಂಗೇರ ಪೆರ್ಲಬೈಲು,ಸಾಮಾಜಿಕ ಕಾರ್ಯಕರ್ತ ಜಗದೀಶ ಪೂಜಾರಿ ಕುಮ್ಡೇಲ್, ಪ್ರಮುಖರಾದ ದಿವಾಕರ ಪೆರ್ಲಬೈಲು,ನಾರಾಯಣ್ ಕಿರೋಡಿಯನ್, ಸುಧಾಕರ ಕೊಟ್ಟಿಂಜ,ಗೋಪಾಲ್ ಬೊಳ್ಳಾರಿ, ಪ್ರದೀಪ್ ಕುಮಾರ್ ಮೂದಲ್ಮೆ, ಅಶೋಕ್ ಕೊಂಡಣ, ಪ್ರಿಯಾ ಸತೀಶ್,ಜಾಲಜಾಕ್ಷಿ ಕೋಟ್ಯಾನ್, ದೀಪಕ್ ಬೊಳ್ಳಾರಿ,ದಯಾನಂದ ಬೊಳ್ಳಾರಿ,ಭವಾನಿ ಶಂಕರ್,ಪೂಜೇಶ್ ಆಚಾರ್ಯ ರಾಮಲ್ ಕಟ್ಟೆ, ಸುಶಾನ್ ಆಚಾರ್ಯ ಬೊಳ್ಳಾರಿ,ವಿನೋದ್ ಬೊಳ್ಳಾರಿ,ಸಂದೀಪ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.










