ಬಂಟ್ವಾಳ :ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ವಾತ್ಸಲ್ಯ ಕಿಟ್ ವಿತರಣೆ.

Coastal Bulletin
ಬಂಟ್ವಾಳ :ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ವಾತ್ಸಲ್ಯ ಕಿಟ್ ವಿತರಣೆ.

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿಟ್ರಸ್ಟ್ (ರಿ.)ಬಂಟ್ವಾಳ ತಾಲೂಕಿನ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರದ ಮಾತೃಶ್ರೀ ಡಾ ಹೇಮಾವತಿ ವಿ ಹೆಗ್ಡೆಯವರ ವಾತ್ಸಲ್ಯಮಯಿ ಚಿಂತನೆಯಂತೆ ಸಮಾಜದಲ್ಲಿನ ಅತ್ಯಂತ ನಿರ್ಗತಿಕ ಆಶಕ್ತ ಜೀವಗಳನ್ನು ತನ್ನ ಕಾರ್ಯಕರ್ತರ ಮೂಲಕ ಗುರುತಿಸಿ ಮಾಸಿಕವಾಗಿ ಒಂದು ಸಾವಿರದಂತೆ ಮಾಶಾಸನವನ್ನು ನೀಡಿ ವಾತ್ಸಲ್ಯ ಪೌಷ್ಠಿಕಾoಶ ಭರಿತ ಆಹಾರವನ್ನು ಮಾಸಿಕವಾಗಿ ಒದಗಿಸಿ, ಬಂಟ್ವಾಳ ಯೋಜನಾ ಕಚೇರಿ ವ್ಯಾಪ್ತಿಯ 25 ಕುಟುಂಬಗಳಿಗೆ ಗೃಹೋಪಯೋಗಿ ಅಗತ್ಯ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್, ತಾಲೂಕು ಯೋಜನಾಧಿಕಾರಿಗಳದ ಜಯಾನಂದ,

ಒಕ್ಕೂಟ ಅಧ್ಯಕ್ಷರು, ಪದಾಧಿಕಾರಿಗಳು ಜನಜಾಗೃತಿ ಸದಸ್ಯರು, ಜ್ಞಾನ ವಿಕಾಸ ಸಮನ್ವಯಧಿಕಾರಿ ಶ್ರುತಿ, ಮೇಲ್ವಿಚಾರಕಿ ಸವಿತಾ,ಸೇವಾಪ್ರತಿನಿಧಿಗಳು ಇದ್ದರು.

Leave a Comment