Coastal Bulletin

ರಾಜ್ಯಾದ್ಯಂತ ಪ್ರಾದೇಶಿಕ ಸಂಸ್ಕ್ರತಿ ಭಾಷೆಗಳ ಬೆಳವಣಿಗೆಗೆ ಪೂರಕ ಕಾರ್ಯಕ್ರಮಗಳು ನಡೆಯಬೇಕು, ತುಳುವಿಗೆ ಸೂಕ್ತ ಮನ್ನಣೆ ದೊರೆತು ನಮ್ಮ ತುಳುವರನ್ನು ಗೌರವಿಸುವತಾಂಗಬೇಕೀದೆ, ಹಾಗೂ ತುಳುನಾಡಿನ ಪ್ರತಿಯೊರ್ವರು ತುಳುಲಿಪಿ ಕಲಿತು ಮುಂದಿನ ಪೀಳಿಗೆಗೆ ತುಳು ಭಾಷೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ರೋಟರಿ ಜಿಲ್ಲೆ 3181 ರ ರಾಜ್ಯಪಾಲ ಪ್ರಕಾಶ್ ಕಾರಂತ್ ನುಡಿದರು.

ರೋಟರಿ ಬಾಲ ಭವನ ಮಣ್ಣಗುಡ್ಡ ಇಲ್ಲಿ ರೋಟರಿ ಕ್ಲಬ್ ಬೈಕಂಪಾಡಿ ವತಿಯಿಂದ ಗೆನಸಿರಿ ಸಮಾರೋಪ ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತಾಡಿದರು.

ಗೇನಸಿರಿ ಕಾರ್ಯಕ್ರಮದ ಸಂಚಾಲಕ ಶ್ರೀಕಾಂತ್ ಶೆಟ್ಟಿ ಬಾಳ ಪ್ರಸ್ತಾವಿಕಾ ಮಾತಾನಾಡಿ, ರೋಟರಿ ಜಿಲ್ಲಾ ಯೋಜನೆಯಡಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಆನ್ಲೈನ್ ಮೂಲಕ ತುಳು ಲಿಪಿ ಕಲಿಸುವ ಈ ಕಾರ್ಯದಲ್ಲಿ  150ಕ್ಕಿಂತಲೂಹೆಚ್ಚು ಮಂದಿ ಇದರ ಪ್ರಯೋಜನ ಪಡೆದಿದ್ದು, ಹೊರ ಜಿಲ್ಲೆಗಳಿಂದಲೂ ಆಸಕ್ತರು ಭಾಗವಹಿಸಿದ್ದು ಸಂತಸ ತಂದಿದೆ ಎಂದರು.

ರೋಟರಿ ಉಪ ರಾಜ್ಯಪಾಲ ಬಾಲಕೃಷ್ಣ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ನಾಗೇಶ್ ಕುಲಾಲ್ ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು.

ತುಳು ಲಿಪಿ ಶಿಕ್ಷಕರಾದ ಜಗದೀಶ್ ಗೌಡ ಕಲ್ಕಳ, ಕಿನ್ನು ಭಂಡಾರಿ ಉಡುಪಿ, ಕುಶಾಲಾಕ್ಷಿ ಸೂರಿಂಜೆ, ಉಷಾ ಕೃಷ್ಣಾಪುರ ಇವರನ್ನು ಸನ್ಮಾನಿಸಲಾಯಿತು.

ತುಳುನಾಡಿನ ಶೈಲಿಯ  ಭೋಜನ ವನ್ನು ಉಣಬಡಿಸಲಾಯಿತು.ರೋಟರಿ ಜಿಲ್ಲಾ ಸಾಕ್ಷರತ ಸಂಚಾಲಕ ಪ್ರಸಾದ್ ಪ್ರಭು, ಗೆನಸಿರಿ ಕಾರ್ಯಕ್ರಮದ ಕಾರ್ಯದರ್ಶಿ ಗಂಗಾಧರ್ ಬಂಜನ್, ಕ್ಲಬ್ ನ ಸರ್ವ ಸದಸ್ಯರು ಕುಟುಂಬ ಸಮೇತ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಬೈಕಂಪಾಡಿ ಅಧ್ಯಕ್ಷ ಅಶೋಕ್ ಏನ್ ಸುರತ್ಕಲ್ ಅಧ್ಯಕ್ಷತೆ ವಹಿಸಿದರು.

ಸಾನ್ವಿ ಶೆಟ್ಟಿ ತುಳುನಾಡಿನ ಶೈಲಿಯಲ್ಲಿ ನೃತ್ಯದ ಮೂಲಕ ಸ್ವಾಗತಿಸಿದರು. ಶ್ರೀಮತಿ ಅರ್ಪಿತಾ ಶೆಟ್ಟಿ ನಿರೂಪಿಸಿದರು. ದಿನೇಶ್ ಬಂಗೇರ ಪ್ರಾರ್ಥಿಸಿದರು. ಕಾರ್ಯದರ್ಶಿ ಹರೀಶ್ ಬಿ ಶೆಟ್ಟಿ ವಂದಿಸಿದರು.

Leave a Comment