ಬಂಟ್ವಾಳ :ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ಇದರ ನೇತೃತ್ವದಲ್ಲಿ ರೊ ಅನಂತ ಸೋಮಯಾಜಿ ಸಭಾಭವನದಲ್ಲಿ ಹನ್ನೊಂದು ಇಂಟರಾಕ್ಟ್ ಕ್ಲಬ್ ಗಳ ಪದಗ್ರಹಣ ಸಮಾರಂಭ ವಿಶೇಷ ರೀತಿಯಲ್ಲಿ ನಡೆಯಿತು. ನಿಯೋಜಿತ ಜಿಲ್ಲಾ ಗವರ್ನರ್ ವಿಕ್ರಂ ದತ್ತ ಹಾಗೂ ಮೇಜರ್ ಜನರಲ್ ಸುಧೀರ್ ಪೈ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗಣೇಶ್ ಶೆಟ್ಟಿ, ಸಂಪಾದನೆ ಎಂದರೆ ಹಣ ಸಂಪಾದನೆಯಲ್ಲ ಪ್ರೀತಿಯನ್ನು ಸಂಪಾದಿಸುವುದು ಹಾಗೂ ಸಮಾಜದಲ್ಲಿ ಗೌರವ ಸಂಪಾದನೆ ಮಾಡುವುದು.ರೋಟರಿಗೆ ಸೇರಿದಾಗ ಅದು ಸ್ವಾಭಾವಿಕವಾಗಿ ದೊರಕುತ್ತದೆ.ಸಮಾಜದಲ್ಲಿ ಇರತಕ್ಕಂತಹ ಮಕ್ಕಳ ಯುವಕರ ಮುಂದಿನ ಜೀವನವೂ ಅತ್ಯಂತ ಹಸನಾಗಲಿ ಎನ್ನುವ ದೃಷ್ಟಿಯಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಸಮಯದಲ್ಲಿ ನಾಯಕತ್ವ ಹಾಗೂ ಉತ್ತಮ ಮಾರ್ಗದರ್ಶನವನ್ನು ನೀಡಿದಾಗ
ಸಮಾಜಮುಖಿಯಾಗಿ ಕೆಲಸವನ್ನು ಮಾಡಲು ಸ್ಫೂರ್ತಿ ಮತ್ತು ಆಸಕ್ತಿ ಉಂಟಾಗುತ್ತದೆ ಹಾಗೂ ಇತರರಿಗೆ ಸಹಾಯ ಮಾಡುವ ಮನೋಭಾವನೆ ಬೆಳೆಯುತ್ತದೆ,ತನ್ನ ಕಾಲ ಮೇಲೆ ನಿಂತು ಜೀವನ ಸಾಗಿಸುವ ಮನೋಭಾವನೆ ಬೆಳೆದು . ಕಷ್ಟದ ಸಂದರ್ಭದಲ್ಲಿಯೂ ಜೀವನ ಸಾಗಿಸುವಂತಹ ಛಲ ಮತ್ತು ಆತ್ಮವಿಶ್ವಾಸ,ಧೈರ್ಯ ಉಂಟಾಗುತ್ತದೆ. ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಬೇಕು ಹಾಗೂ ಇತರರಿಗೂ ಆದರ್ಶ ಆಗಬೇಕು ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಪ್ರಕಾಶ್ ಕಾರಂತ್, ಎ.ಜಿ. ಲಾರೆನ್ಸ್ , ಎ.ಜಿ ರಾಘವೇಂದ್ರ ಭಟ್, ಇಲಿಯಾಸ್ ಸೈಂಕ್ಟಿಸ್ಟ್, ರವೀಂದ್ರ ದರ್ಬೆ, ಮಂಜುನಾಥ್ ಆಚಾರ್ಯ, ಪದ್ಮನಾಭ ರೈ, ಸತೀಶ್ ಕುಮಾರ್ ಕೆ, ಪಲ್ಲವಿ ಕಾರಂತ್ ವೇದಿಕೆಯಲ್ಲಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ, ರಾಷ್ಟ್ರಧ್ವಜದ ಬಗ್ಗೆ ಮಂಜೇಗೌಡ,ಭರವಸೆಯ ಬಗ್ಗೆ ರೋ ವಿಶ್ವಾಸ್
ಶೆಣೈ, ಸಂಚಾರಿ ನಿಯಮಗಳು ಹಾಗೂ ಮಾದಕ ವಸ್ತುಗಳ ಬಗ್ಗೆ ಸಂಚಾರಿ ಉಪನಿರೀಕ್ಷಕರಾದ ಕೆ ಪಿ ಸುತೇಶ್, ನಾಯಕತ್ವದ ಬಗ್ಗೆ ಸತೀಶ್ ಬೋಳಾರ್, ಅತ್ಯುತ್ತಮ ಮಾಹಿತಿ ನೀಡಿದರು. ಚಂದ್ರಯಾನ ಮೂರರ ಯಶಸ್ಸಿನ ರೂವಾರಿಗಳಾದ ಇಸ್ರೋ ವಿಜ್ಞಾನಿಗಳ ತಂಡಕ್ಕೆ ವಿಶೇಷ ರೀತಿಯಲ್ಲಿ ಗೌರವ ಹಾಗೂ ಅಭಿನಂದನೆಯನ್ನು ಭಾಸ್ಕರ್ ರಾವ್, ರೊ. ಪ್ರಥ್ವಿರಾಜ್ ನಾ ಯಕತ್ವದಲ್ಲಿ ಎಲ್ಲರೂ ಒಟ್ಟಾಗಿ ನಡೆಸಿ ಕೊಡುವುದರ ಮೂಲಕ ಸಲ್ಲಿಸಲಾಯಿತು. ಇಂದಿನ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದ ಇಂಟ್ರಾಕ್ಟ್ ಕ್ಲಬ್ ಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರನ್ನು ಅಭಿನಂದಿಸಿ ಇಂಟರಾಕ್ಟ್ ಕ್ಲಬ್ ನ ಕೊರ್ಡಿನೇಟರ್ ಗಳಾದ ಶಿಕ್ಷಕರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಮಧುಸೂಧನ ಶೆಣೈ ಧನ್ಯವಾದ ಅರ್ಪಿಸಿದರು. ರೊ ಶೇಷಪ್ಪ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿಂದ್ರ ಶೆಟ್ಟಿ, ಸುಧೀರ್ ಶೆಟ್ಟಿ, ಚಂದ್ರಶೇಖರ್ ಕೋರಿಯಾ, ಮಧುಸೂಧನ್ ಶೆಣೈ , ಭಾರತಿ ಶೇಸಪ್ಪ, ಸದಾಶಿವ ಬೊ೦ಡಾಲ, ರಮೇಶ್ ನೆಟ್ಲ, ಪ್ರಶಾಂತ್ ಕಾರಂತ್, ದಯಾನಂದ ರೈ ,ಆಶಾಮಣಿ, ಚಂದ್ರಾವತಿ, ಉಮೇಶ್ ನೆಲ್ಲಿಗುಡ್ಡೆ, ಪವಿತ್ರ ಮಯ್ಯ, ಸುಂದರ್ ಬಂಗೇರ, ಪ್ರೀಮ ದಯಾನಂದ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು















