ಬಂಟ್ವಾಳ :ಕುಲಾಲ ಸಮಾಜದ ಯುವಜನತೆ ರೈತರೊಂದಿಗೆ ಕೈಜೋಡಿಸುವ ಮೂಲಕ ಕೃಷಿ ಕಾರ್ಯದತ್ತ ಒಲವು ನೀಡಬೇಕು, ಕೃಷಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮುಂದಿನ ಪೀಳಿಗೆಗೆ ಕೃಷಿಯನ್ನು ತಲುಪಿಸುವ ಕೆಲಸ ಮಾಡಬೇಕು ಎಂದು ಶ್ರೀ ವೈಷ್ಣವಿ ಆದಿಶಕ್ತಿ ಸೇವಾ ಟ್ರಸ್ಟ್ ಮುಳಿಯ ಇಲ್ಲಿನ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಇದರ ಆಶ್ರಯದಲ್ಲಿ ಆಗಸ್ಟ್ 27ರಂದು ಭಾನುವಾರ ಕುರ್ನಾಡು ದೇವಸ್ಯ ಗದ್ದೆಯಲ್ಲಿ ನಡೆದ ಕೆಸರ್ದ ಕಂಡಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಯುವ ವೇದಿಕೆಯ ಉಳ್ಳಾಲ ಕ್ಷೇತ್ರದ ಸಂಚಾಲಕ ದಾಸ್ ಪ್ರಮೋಷನ್ ಸಂಸ್ಥೆಯ ಆಡಳಿತ ನಿರ್ದೇಶಕ ಲಯನ್ ಅನಿಲ್ ದಾಸ್ ಮಾತನಾಡಿ,ಸಮಾಜದ ಹಿರಿಯ ಸಂಘಟನೆಗಳು ಕಿರಿಯರು ಮಾಡುವ ಕೆಲಸಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಇಂತಹ ಕೆಲಸಗಳಿಗೆ ಉತ್ತೇಜನ ನೀಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಇದರ ಪ್ರೇಮಾನಂದ ಕುಲಾಲ್, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ನಿರ್ದೇಶಕಿ ಮಮತಾ ಅಣ್ಣಯ್ಯ ಕುಲಾಲ್, ಸಂಶೋಧಕಿ ಮತ್ತು ಉಪನ್ಯಾಸಕಿ ರಶ್ಮಿ ಅಮ್ಮೆಂಬಳ, ಯುವ ವೇದಿಕೆಯ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ ಶುಭ ಹಾರೈಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕುಲಾಲ ಸಮಾಜದ ಹಿರಿಯರೂ, ಯುವ ವೇದಿಕೆಯ ಮಾರ್ಗದರ್ಶಕರು ಆಗಿರುವ ವೆಂಕಪ್ಪ ಮಾಸ್ತರ್ ಅಸೈಗೋಳಿ, ಸಮಾಜ ಸೇವಕರಾದ ಸುಂದರ್ ಕುಲಾಲ್ ಕೊಡಕಲ್ಲು, ಯುವ
ವೇದಿಕೆಯ ಉಳ್ಳಾಲ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ನವೀನ್ ಕುಲಾಲ್ ಪಿದಮಲೆ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆಯ ರಾಜ್ಯಾಧ್ಯಕ್ಷ ಗಂಗಾಧರ ಬಂಜನ್, ಕೆನರಾ ಬ್ಯಾಂಕಿನ ಹಿರಿಯ ಶಾಖ ಪ್ರಬಂಧಕ ಪುರಂದರ ಎ, ಕೊಲ್ಯ ಕುಲಾಲ ಸಂಘದ ಅಧ್ಯಕ್ಷ ಭಾಸ್ಕರ ಕುತ್ತಾರು, ಇರಾ ಕುಲಾಲ ಸಂಘದ ಅಧ್ಯಕ್ಷ ಪುರುಷೋತ್ತಮ ಕುಲಾಲ್, ಕಾಸರಗೋಡು ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ನವೀನ್ ಮಜಲು, ಹಿರಿಯ ಯಕ್ಷಗಾನ ಕಲಾವಿದ ಕೃಷ್ಣ ಮೂಲ್ಯ ಆನೆಗುಂಡಿ, ನರಿಂಗಾಣ ಕುಲಾಲ ಗ್ರಾಮ ಸಮಿತಿ ಅಧ್ಯಕ್ಷ ಮಾದವ ಕುಲಾಲ್, ಕುರ್ನಾಡು ಗ್ರಾಮ ಪಂಚಾಯತಿ ಸದಸ್ಯ ಗೋಪಾಲ ಬಂಗೇರ ಉಪಸ್ಥಿತರಿದ್ದರು.
ಯುವ ವೇದಿಕೆಯ ಮಹಿಳಾ ಸಂಚಾಲಕಿ ಶಾರದಾ ಕುಲಾಲ್ ಸ್ವಾಗತಿಸಿ ಪ್ರಸ್ತಾವನೆಯ ಮಾತುಗಳನ್ನಾಡಿದರು. ಯುವ ವೇದಿಕೆ ಸದಸ್ಯರಾದ ಜಯಂತ ಸಂಕೊಳಿಗೆ ಧನ್ಯವಾದವಿತ್ತರು, ಹೇಮಚಂದ್ರ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು.ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳ ಬಳಿಕ ಕೃಷಿ ಕಾರ್ಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಗದ್ದೆಯಲ್ಲಿ ಭತ್ತದ ನಾಟಿ ಮಾಡಲಾಯಿತು.















