breaking news

Coastal Bulletin

ಬಂಟ್ವಾಳ:ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬಂದಿರುವುದು ಸಂತಸ ತಂದಿದ್ದು, ವಿಧಾನಸಭಾಧ್ಯಕ್ಷ ಹುದ್ದೆ ತಿರಸ್ಕರಿಸಿದ ಕೆಲವೊಂದು ಹಿರಿಯ ಶಾಸಕರಿಗೆ ಅದರ ಮಹತ್ವ ಗೊತ್ತಿಲ್ಲ. ಯುವ ಉತ್ಸಾಹಿ ಯು.ಟಿ.ಖಾದರ್ ಈ ಹುದ್ದೆ ಒಪ್ಪಿಕೊಂಡು ಅಧಿಕಾರ ಸ್ವೀಕರಿಸಿದ ಬಳಿಕ ಅರ್ಥಪೂರ್ಣವಾಗಿ ಮಾತನಾಡಿದ್ದಾರೆ. ನಾನು ಟಿ.ವಿ.ಪರದೆಯಲ್ಲಿ ಎಲ್ಲವನ್ನೂ ವೀಕ್ಷಿಸಿದ್ದು, ಸ್ಪೀಕರ್ ಹುದ್ದೆ ಗೌರವ ಉಳಿಸುವ ಮಹತ್ತರ ಜವಾಬ್ದಾರಿ ಹೊಂದಿರುವ ನಿಮ್ಮ ನಡೆ ಬಗ್ಗೆ ನನಗೆ ಹೆಮ್ಮೆ ಅನಿಸಿತು ಎಂದು ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹೇಳಿದ್ದಾರೆ.

ಇಲ್ಲಿನ ಬಸ್ತಿಪಡ್ಪು ಎಂಬಲ್ಲಿ ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಮನೆಗೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸೋಮವಾರ ಸಂಜೆ ಭೇಟಿ ನೀಡಿ ಆಶೀವರ್ಾದ ಪಡೆದ ವೇಳೆ ಅವರು ಮಾತನಾಡಿದರು. ಕೇಂದ್ರ ಸಚಿವರಾಗಿದ್ದ ಕೆಲವೊಂದು ಮಂದಿ ಶಾಸಕರಾಗಿ ಬಳಿಕ ಸಚಿವ ಸ್ಥಾನ ಆಕಾಂಕ್ಷಿಗಳಾಗಿರುವುದು ಅವರಲ್ಲಿನ ಅಧಿಕಾರ ದಾಹ ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಈ

ಹಿಂದಿನಿಂದಲೂ ನನಗೆ ಮಾರ್ಗದರ್ಶನ ನೀಡುತ್ತಾ ಬಂದಿರುವ ಹಿರಿಯ ನಾಯಕ ಪೂಜಾರಿ ಅವರು ಆಶೀವರ್ಾದ ಮಾಡಿದ್ದಾರೆ. ಸ್ಪೀಕರ್ ಹುದ್ದೆ ಗೌರವ ಉಳಿಸುವುದರ ಜೊತೆಗೆ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯಲು ಸಲಹೆ ನೀಡಿದ್ದಾರೆ ಎಂದರು.

ಪ್ರಮುಖರಾದ ಸದಾಶಿವ ಉಳ್ಳಾಲ್, ಈಶ್ವರ್ ಉಳ್ಳಾಲ್, ದೀಪಕ್ ಪಿಲಾರ್, ಮಹಮ್ಮದ್ ಮೋನು ಪಾವೂರು, ಹಾಸಿರ್ ಪೇರಿಮಾರ್, ಪುರುಷೋತ್ತಮ ಶೆಟ್ಟಿ, ದಿನೇಶ ಪೂಜಾರಿ, ವಿಕ್ರೇಶ್ ಮತ್ತಿತರರು ಇದ್ದರು.

Leave a Comment