ಬಿ ಸಿ ರೋಡ್ :ಎ.02ರಂದು ವಿಕಾಸಂ ಸೇವಾ ಫೌಂಡೇಶನ್ ಅಶ್ರಯದಲ್ಲಿ ವಿಶ್ವ ಆಟಿಸಂ ದಿನಾಚರಣೆ. ಏನಿದು ಆಟಿಸಂ..? ವಿಕಾಸಂ ಸೇವಾ ಫೌಂಡೇಶನ್ ನ ಪಾತ್ರವೇನು...?

Coastal Bulletin
ಬಿ ಸಿ ರೋಡ್ :ಎ.02ರಂದು ವಿಕಾಸಂ ಸೇವಾ ಫೌಂಡೇಶನ್ ಅಶ್ರಯದಲ್ಲಿ ವಿಶ್ವ ಆಟಿಸಂ ದಿನಾಚರಣೆ. ಏನಿದು ಆಟಿಸಂ..? ವಿಕಾಸಂ ಸೇವಾ ಫೌಂಡೇಶನ್ ನ ಪಾತ್ರವೇನು...?

ಬಂಟ್ವಾಳ :ವಿಕಾಸಂ ಸೇವಾ ಫೌಂಡೇಶನ್,ಸಕ್ಷಮ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಲಯನ್ಸ್ ಕ್ಲಬ್ ಬಂಟ್ವಾಳ ಇವರ ಸಹಯೋಗದಲ್ಲಿ ವಿಶ್ವ ಆಟಿಸಂ ದಿನಾಚರಣೆ ಎ.02ರಂದು ಬೆಳಿಗ್ಗೆ ಗಂಟೆ 10-00ಕ್ಕೆ ಲಯನ್ಸ್ ಸೇವಾ ಮಂದಿರ, ಬಂಟ್ವಾಳದಲ್ಲಿ ನಡೆಯಲಿದೆ.


ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ ಮಾಡಲಿದ್ದು, ಅಧ್ಯಕ್ಷತೆಯನ್ನು, ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷರಾದ ಲ| ರಾಧಾಕೃಷ್ಣ ಬಂಟ್ವಾಳ ವಹಿಸಲಿದ್ದಾರೆ. ಅಲ್ಲದೆ ಅತಿಥಿಗಳಾಗಿ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವಿಕಾಸಂ ಸೇವಾ ಫೌಂಡೇಶನ್ ಸ್ಥಾಪಕ ನಿರ್ದೇಶಕರಾದ ಗೋಪಾಲ್ ಜಿಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏನಿದು ಆಟಿಸಂ....?

ಏಪ್ರಿಲ್ ತಿಂಗಳ 2 ತಾರೀಕನ್ನು ವಿಶ್ವ ಆಟಿಸಂ ದಿನ ( World Autism Observation Day) ಗುರುತಿಸಲಾಗಿದೆ. ಆಟಿಸಂ ಸಮಸ್ಯೆಯು ಮೆದುಳು ಹಾಗೂ ನರ ಸಂಬಂಧೀ ವೈಕಲ್ಯತೆಯಾಗಿದೆ. ಈ ದಿನವನ್ನು ಜನಸಾಮಾನ್ಯರಲ್ಲಿ ಆಟಿಸಂ ಸ್ಪೆಕ್ಟಂ ಡಿಸಾರ್ಡರ್ ನ ಬಗ್ಗೆ ಜಾಗೃತಿಯನ್ನು ಮೂಡಿಸಲು ಮೀಸಲಿಡಲಾಗಿದೆ. ಇಂದು ಜನಿಸುತ್ತಿರುವ ಪ್ರತೀ 60 ಮಕ್ಕಳಲ್ಲಿ ಒಂದು ಮಗು ಆಟಿಸಂ ಲಕ್ಷಣಗಳನ್ನು ತೋರಿಸುತ್ತಿದೆ. ಮಾತು ಬರುತ್ತಿದ್ದರೂ ಸಮರ್ಪಕವಾಗಿ ಸಂವಹನ

ಮಾಡಲಾಗದ, ಕೇಳುತ್ತಿದ್ದರೂ ಕೇಳಿಸಿಕೊಳ್ಳಲಾರದ, ಇತರರೊಂದಿಗೆ ಬೆರೆಯಲಾಗದ, ರಚನಾತ್ಮಕವಾದ ಹಾಗೂ ವೈವಿಧ್ಯಮಯವಾದ ಕಲ್ಪನೆ ಅಥವಾ ಆಲೋಚನೆಗಳುಳ್ಳ ಹಾಗೂ ತನ್ನೊಳಗೆ ತಾನೇ ಹುದುಗಿಕೊಂಡಿರುವಂತೆ ತೋರುವ ಪ್ರವೃತ್ತಿಯ ಸಮಸ್ಯೆಯನ್ನು ಆಟಿಸಂ ಎಂದು ಕರೆಯಲಾಗುತ್ತದೆ.


ವಿಕಾಸಂ ಸೇವಾ ಫೌಂಡೇಶನ್‌ ಸಂಸ್ಥೆಯ ಪ್ರತಿಫಲಾಪೇಕ್ಷೆ ಇಲ್ಲದ ಸೇವೆ :

ಕಳೆದ ಒಂದೂವರೆ ವರ್ಷಗಳಿಂದ ಬಂಟ್ವಾಳ ತಾಲೂಕಿನ ಬಿ ಸಿ ರೋಡಿನಲ್ಲಿ ಕಾರ್ಯಾಚರಿಸುತ್ತಿರುವ ವಿಕಾಸಂ ಸೇವಾ ಫೌಂಡೇಶನ್‌ ಸಂಸ್ಥೆಯು ಬೌದ್ಧಿಕ ನ್ಯೂನತೆಯಿರುವ ಅದರಲ್ಲೂ ಮುಖ್ಯವಾಗಿ ಆಟಿಸಂ ಬಾಧಿತ ಮಕ್ಕಳಿಗಾಗಿ ಕೆಲಸ ಮಾಡುತ್ತಿದೆ. ಇಂತಹ ಮಕ್ಕಳನ್ನು ಆರಂಭಿಕ ಪ್ರಾಯದಲ್ಲೇ ಪತ್ತೆಹಚ್ಚುವುದು, ಆರಂಭಿಕ ಹಂತದಲ್ಲೇ ಅಗತ್ಯ ತರಬೇತಿಗಳನ್ನು ಕೊಡುವುದು ಹಾಗೂ ಸಾಮಾನ್ಯ ಶಾಲಾ ಶಿಕ್ಷಣದ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಂಸ್ಥೆಯು ಕೆಲಸ ಮಾಡುತ್ತಿದೆ. ವಿಕಾಸಂ ಸೇವಾ ಫೌಂಡೇಶನ್ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಈ ದಿವ್ಯಾಂಗ ಮಕ್ಕಳಿಗೆ ಉಚಿತವಾಗಿ ಸೇವೆಯನ್ನು ಒದಗಿಸುತ್ತಿದೆ.

Leave a Comment