ಫರಂಗಿಪೇಟೆ: ಎ.5, ಸೇವಾಂಜಲಿ ಪ್ರತಿಷ್ಠಾನ ಅಶ್ರಯದಲ್ಲಿ ಕ್ಷಯ ರೋಗಿಗಳಿಗೆ ಆಹಾರ-ಧವಸಧಾನ್ಯ ವಿತರಣಾ ಕಾರ್ಯಕ್ರಮ

Coastal Bulletin
ಫರಂಗಿಪೇಟೆ: ಎ.5, ಸೇವಾಂಜಲಿ ಪ್ರತಿಷ್ಠಾನ ಅಶ್ರಯದಲ್ಲಿ ಕ್ಷಯ ರೋಗಿಗಳಿಗೆ ಆಹಾರ-ಧವಸಧಾನ್ಯ ವಿತರಣಾ ಕಾರ್ಯಕ್ರಮ

ಬಂಟ್ವಾಳ :ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇವರ ಅಶ್ರಯದಲ್ಲಿ ಕ್ಷಯ ರೋಗಿಗಳಿಗೆ ಆಹಾರ-ಧವಸಧಾನ್ಯ ವಿತರಣೆ ಕಾರ್ಯಕ್ರಮವು ಎ.5ನೇ ಶುಕ್ರವಾರ ಬೆಳಿಗ್ಗೆ ಗಂಟೆ 10-00ರಿಂದ ಸೇವಾಂಜಲಿ ಸಭಾಗೃಹ, ಫರಂಗಿಪೇಟೆಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಅಬ್ದುಲ್ ಸಲಾಮ್ ಅಧ್ಯಕ್ಷರು, ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್, ತುಂಬೆ ಹಾಗೂ ಕೆ. ಎನ್. ಗಂಗಾಧರ ಆಳ್ವ ಪ್ರಾಂಶುಪಾಲರು, ತುಂಬೆ ಪದವಿ ಪೂರ್ವ

ಕಾಲೇಜು,Rtn. IPDG ಪ್ರಕಾಶ್ ಕಾರಂತ ನರಿಕೊಂಬು ಗಣ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ. ಕೃಷ್ಣ ಕುಮಾರ್ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment