Coastal Bulletin

ನಂದಾವರ : ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದ ಅಷ್ಟ ಬಂಧ ಬ್ರಹ್ಮಕಲಶೋತ್ಸವ‌ದ ಆಮಂತ್ರಣ ಪತ್ರಿಕೆಯನ್ನು‌ ಮನೆ ಮನೆ ಅಭಿಯಾನದ ಮೂಲಕ‌ ವಿತರಿಸುವ ಕಾರ್ಯಕ್ಕೆ ಶ್ರೀ ಕ್ಷೇತ್ರದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಅರವಿಂದ ಭಟ್ ಪದ್ಯಾಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕ ಮಹೇಶ್ ಭಟ್ , ರಾಧಾಕೃಷ್ಣ ತಂತ್ರಿ ಪೊಳಲಿ, ಚಂದ್ರ ಕುಮಾರ್ ಕೊಡಿಯಲ್ ಬೈಲ್ , ಗೋಪಾಲ ಮೂಲ್ಯ ನೆಲ್ಲಿ, ವಿಜಯಲಕ್ಷ್ಮಿ ಮಾಧವರಾಯ ಕುಡ್ವ, ಚಂದ್ರಕಾಂತ ಬಂಗೇರ, ಬ್ರಹ್ಮಕಲಶೋತ್ಸವ‌ ಸಮಿತಿ ಕಾರ್ಯಾಧ್ಯಕ್ಷ ಕೆ.ವಿಶ್ವನಾಥ ಆಳ್ವ, ಪ್ರಧಾನ ಕಾರ್ಯದರ್ಶಿ ಅಶೋಕ್ ಗಟ್ಟಿ, ಕೋಶಾಧಿಕಾರಿ ಎನ್.ಕೆ. ಶಿವ ಚಾಲನೆ ನೀಡಿದರು.

ಸಂದರ್ಭದಲ್ಲಿ ವ್ಯವಸ್ಥಾಪನಾ  ಸಮಿತಿಯ ಕವಿತಾ ವಸಂತ್, ಜಯಶ್ರೀ ಅಶೋಕ್, ದೇವಪ್ಪ ನಾಯ್ಕ್, ಬ್ರಹ್ಮಕಲಶೋತ್ಸವ‌ ಸಮಿತಿ ಕಾರ್ಯದರ್ಶಿ ಜಗದೀಶ್ ಐತಾಳ್, ನಾಗೇಶ್ ಕುಲಾಲ್ ನರಿಕೊಂಬು ಮತ್ತು ಸಂಚಾಲಕರಾದ ಶ್ರೀನಿವಾಸ ನಾಯ್ಕ್ ಮೋಹನ್ ಕುಲಾಲ್, ದಯಾನಂದ ಬಿ.ಎಂ, ಗಣೇಶ್ ದೇವಾಡಿಗ, ರಾಮಕೃಷ್ಣ ಭಂಡಾರಿ ಹೀಗೆ ಹಲವು ಗಣ್ಯರು ಉಪಸ್ಥಿತರಿದ್ದರು.

ಅಭಿವೃದ್ಧಿ ಸಮಿತಿ ಸದಸ್ಯ ದಾಮೋದರ ಬಿ.ಎಂ. ಪ್ರಸ್ತಾವನೆ ಮಾಡಿದರು. ಸಮಿತಿ ಸಂಚಾಲಕ ವಸಂತ ಪೆರಾಜೆ ನಿರೂಪಿಸಿದರು.

Leave a Comment