ಬಂಟ್ವಾಳ :ಮರ್ಯಾದಾ ಪುರುಷೋತ್ತಮ ಅಯೋಧ್ಯಾಪತಿ ಪ್ರಭು ಶ್ರೀರಾಮಚಂದ್ರನ ಆದರ್ಶಗಳನ್ನು ನಾಮ ಜಪದೊಂದಿಗೆ ಸದಾ ನೆನೆಪಿಸುವ, ಮೈಗೂಡಿಸುವ ಸಮರ್ಥ ಜಾಗ್ರತ ಹಿಂದೂ ಸಮಾಜದ ಶ್ರೀರಕ್ಷೆಗಾಗಿ ಪ್ರತೀ ಮೂರು ವರ್ಷಗಳಿಗೊಮ್ಮೆ ಆರು ಗ್ರಾಮದ ಭಕ್ತರ ಕುಡುವಿಕೆಯಲ್ಲಿ ಆಯೋಜಿಸಲಾಗುವ "ಶ್ರೀ ರಾಮ ನಾಮ ತಾರಕ ಜಪ ಯಜ್ಞ"ದ ಪೂರ್ವಭಾವಿ ಸಮಾಲೋಚನಾ ಸಭೆಯು ಆ 31ರಂದು ಆದಿತ್ಯವಾರ ಬೆಳಿಗ್ಗೆ 9ಕ್ಕೆ ನೆತ್ತರಕೆರೆಯಲ್ಲಿ ನಡೆಯಲಿದೆ.ಈ ಸಭೆಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ ನಿಕಟಪೂರ್ವ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ಉಪಸ್ಥಿತರಿರುವರು ಎಂದು ಸಂಘಟಕ ದಾಮೋದರ ನೆತ್ತರಕೆರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














