ಕೊಯಿಲ: ಮಾ,30-31 'ಬೊಬ್ಬರ್ಯ, ಕೊರಗಜ್ಜ ನೇಮೋತ್ಸವ'

Coastal Bulletin
ಕೊಯಿಲ: ಮಾ,30-31 'ಬೊಬ್ಬರ್ಯ, ಕೊರಗಜ್ಜ ನೇಮೋತ್ಸವ'

ಬಂಟ್ವಾಳ:ಇಲ್ಲಿನ ಕೊಯಿಲ ಮತ್ತು ಪಂಜಿಕಲ್ಲು ಗ್ರಾಮದ ಗಡಿಭಾಗದಲ್ಲಿರುವ ಬಬ್ಬರ್ಯಬೈಲು ದೈವಸ್ಥಾನದಲ್ಲಿ ಇದೇ 30ರಿಂದ 31ರತನಕ ಬೊಬ್ಬರ್ಯ ಮತ್ತು ಪರಿವಾರ ದೈವಗಳಿಗೆ ವಾರ್ಷಿಕ ನೇಮೋತ್ಸವ ನಡೆಯಲಿದೆ.

ಇದೇ 30ರಂದು ರಾತ್ರಿ 8ಗಂಟೆಗೆ ಬೊಬ್ಬರ್ಯ ದೈವದ ನೇಮೋತ್ಸವ ಮತ್ತು 10 ಗಂಟೆಗೆ ಗಂಗಾ ಭೇಟಿ ಬಳಿಕ ಅಣ್ಣಪ್ಪ ಪಂಜುರ್ಲಿ ಮತ್ತು ಗುಳಿಗ ದೈವದ ಕೋಲ ನಡೆಯಲಿದೆ.

ಇದೇ 31ರಂದು ರಾತ್ರಿ 8ಗಂಟೆಗೆ ಕೊರಗಜ್ಜ ದೈವದ ಕೋಲ ನೆರವೇರಲಿದ್ದು, ಎರಡೂ ದಿನಗಳಲ್ಲಿ ಭಕ್ತರಿಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಮಿತಿ ಸಂಚಾಲಕ ವಸಂತ್ ಕುಮಾರ್ ಅಣ್ಣಳಿಕೆ ತಿಳಿಸಿದ್ದಾರೆ.

Leave a Comment