ಬಂಟ್ವಾಳ: ಈ ಜಿಲ್ಲೆಯಲ್ಲಿ ಶ್ರೀನಿವಾಸ ಮಲ್ಯರಿಂದ ಹಿಡಿದು ಆಸ್ಕರ್ ಫೆನರ್ಾಂಡಿಸ್ ಮತ್ತು ಬಿ.ಜನಾರ್ದನ ಪೂಜಾರಿ ತನಕ 40 ವರ್ಷಗಳಲ್ಲಿ ಕಾಂಗ್ರೆಸ್ ಸಂಸದರು ಕೈಗಾರಿಕೋದ್ಯಮ ಸಹಿತ ವಿವಿಧ ಕಾಲೇಜು ಮತ್ತು ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಉದ್ಯೋಗ ಸೃಷ್ಟಿಗೆ ಕಾರಣೀಭೂತರಾಗಿದ್ದರೆ, ಕಳೆದ 33 ವರ್ಷಗಳಲ್ಲಿ ಬಿಜೆಪಿ ಸಂಸದರ ಕೊಡುಗೆ ಏನು...? ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯಥರ್ಿ ಆರ್.ಪದ್ಮರಾಜ್ ಪ್ರಶ್ನಿಸಿದ್ದಾರೆ.
ಕೇವಲ ಅಪಪ್ರಚಾರ ಮತ್ತು ವಿವಿಧ ಜಾತಿ-ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಮೂಲಕ ಮಾತ್ರ ಕಾಂಗ್ರೆಸ್ ಸೋಲಿಸಲು ಸಾಧ್ಯ ಎಂದು ಮನಗಂಡ ಬಿಜೆಪಿ ಈಗಲೂ ಅದನ್ನೇ ಜಪಿಸುತ್ತಿದೆ ಎಂದು ಅವರು ಟೀಕಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, 'ಕಾಂಗ್ರೆಸ್ ಪಕ್ಷ ಬಡವರ ಕಣ್ಣೀರು ಒರೆಸಲು ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿದೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಕಾಂಗ್ರೆಸ್ ಪರವಾಗಿದ್ದು, ಸಮಸ್ತ ಹಿಂದುಳಿದ ವರ್ಗ ಸಂಗಟಿತರಾಗಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸಕರ್ಾರ ಕೊಟ್ಟ
ಭರವಸೆ ತ್ವರಿತವಾಗಿ ಈಡೇರಿಸುವ ಮೂಲಕ ದೇಶಕ್ಕೆ ಮಾದರಿಯಾಗಿದೆ ಎಂದರು.
ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಶುಭ ಹಾರೈಸಿದರು. ಕೆಪಿಸಿಸಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಿಯೂಸ್ ಎಲ್.ರಾಡ್ರಿಗಸ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಬಿ.ಪದ್ಮಶೇಖರ ಜೈನ್, ಸುಭಾಶ್ವಂದ್ರ ಶೆಟ್ಟಿ,ಸುದರ್ಶನ್ ಜೈನ್, ಕೆ.ಪದ್ಮನಾಭ ರೈ, ಅಬ್ಬಾಸ್ ಆಲಿ, ಜಯಂತಿ ವಿ.ಪೂಜಾರಿ, ನಾರಾಯಣ ನಾಯ್ಕ್, ಮೋಹನ ಗೌಡ ಕಲ್ಮಂಜ, ಸುರೇಶ್ ಕುಲಾಲ್,, ಸುರೇಶ ಜೋರ, , ಬಾಲಕೃಷ್ಣ ಆಳ್ವ ಕೊಡಾಜೆ ಮತ್ತಿತರರು ಇದ್ದರು.









