Coastal Bulletin

ಬಂಟ್ವಾಳ :ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವ ಇರಾದೆಯಿಂದ, ಪ್ರಾಮಾಣಿಕ ಕೆಲಸ ಮಾಡಿ ಬಂಟ್ವಾಳ ಕ್ಷೇತ್ರಕ್ಕೆ 2ಸಾವಿರ ಕೋಟಿಗೊ ಅಧಿಕ ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾಮಗಾರಿ ಮಾಡಿದ ತೃಪ್ತಿ ಇದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.

ಅವರು ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,2018 ರಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ಬಳಿಕ ರಾಜ ಧರ್ಮ ವನ್ನು ಪಾಲಿಸಿ, ಎಲ್ಲರನ್ನು ಸಮಾನವಾಗಿ ಕಂಡು, ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಒಂದು ಕೋಮುಗಲಭೆ, ಅಹಿತಕರ ಘಟನೆಗಳು ನಡೆಯದೆ ಬಂಟ್ವಾಳದಲ್ಲಿ ಶಾಂತಿಯುತ ವಾತಾವರಣವನ್ನು ನಿರ್ಮಿಸಿದ ಖುಷಿ ಇದೆ ಎಂದರು.

ಈ ಸಂದರ್ಭದಲ್ಲಿ ತನ್ನ 5 ವರ್ಷಗಳ ಆಡಳಿತ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ತನ್ನೊಂದಿಗೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯೆಡಿಯೂರಪ್ಪ, ರಾಜಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್,ಸಂಪುಟದ ಸಚಿವರುಗಳಿಗೆ ಮತ್ತು ಎಲ್ಲಾ ಅಧಿಕಾರಿ ವರ್ಗಕ್ಕೆ ವಂದನೆಗಳನ್ನು ಸಲ್ಲಿಸುತ್ತೇನೆ . ಐದು ವರ್ಷದ ನನ್ನ ಜತೆಗಿದ್ದು ಸಹಕರಿಸಿದ ಪಕ್ಷದ ಎಲ್ಲಾ ನಾಯಕರಿಗೆ, ಕಾರ್ಯಕರ್ತರಿಗೆ, ಧನ್ಯವಾದವನ್ನು ಅರ್ಪಿಸುತ್ತೇನೆ. ಕ್ಷೇತ್ರದ ಮತದಾರ ಬಂಧುಗಳಿಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಹೇಳಿ, ತಮ್ಮ ಪ್ರೀತಿ ವಿಶ್ವಾಸ ಮುಂದೆಯೂ ಇರಲಿ ಎಂದು ಮನವಿ ಮಾಡಿದರು , ಹಿರಿಯರ ಆಶ್ರೀರ್ವಾದ, ಮತದಾರರ ಪ್ರೀತಿ ಸಹಕಾರದಿಂದ ಉತ್ತಮ ಆಡಳಿತವನ್ನು ಸುಸೂತ್ರವಾಗಿ ನಡೆಸಲು ಸಹಾಯವಾಯಿತು ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಅನುದಾನ ಹಾಗೂ ಅಭಿವೃದ್ಧಿ ಕಾರ್ಯ ವಿವರ

1 ಹೊಸ ಕಲ್ಪನೆಯ ರಾಜ್ಯದಲ್ಲೇ ಪ್ರಥಮ ಬಾರಿಗೆ ಆರೋಗ್ಯ ಇಲಾಖೆ ಮತ್ತು ಸಾರಿಗೆ ಇಲಾಖೆಯ ಸಹಭಾಗಿತ್ವದಲ್ಲಿ ಐಸಿಯು ಬಸ್‌ ಮೂಲಕ ಸುಮಾರು 18,000 ಜನರ ಆರೋಗ್ಯ ತಪಾಸಣೆ.

2. ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆ ಎಂಬಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲೆ ರೂ.29 ಕೋಟಿ

3. ಬಂಟ್ವಾಳ ತಾಲೂಕು ಜಕ್ರಿಪೆಟ್ಟು ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ರೂ.135 ಕೋಟಿ.

4. ಬಾಳ್ತಿಲ ಗ್ರಾಮದ ಏತನೀರಾವರಿ ಯೋಜನೆ ರೂ.125 ಕೋಟಿ

5. ನರಿಕೊಂಬು ಗ್ರಾಮದ ಶ್ರೀ ವೀರಭದ್ರ ಮತ್ತು ನಾಲ್ಕೆತ್ತಾಯ ಪಂಜುರ್ಲಿ ದೈವಸ್ಥಾನದ ಸಮೀಪ ನೇತ್ರಾವತಿ ನದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿ ರೂ.4 ಕೋಟಿ.

6. ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮದ ಕಾರಿಂಜ ಕೆರೆ ಅಭಿವೃದ್ಧಿ ರೂ.2

ಕೋಟಿ.

7. ಬಂಟ್ವಾಳ ತಾಲೂಕು ಆಸ್ಪತ್ರೆ ಮತ್ತು ವಾಮದಪದವು ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಕ್ಸಿಜನ್ ಉತ್ಪಾದನಾ ಘಟಕ ರೂ.2.40 ಕೋಟಿ.

8. ಬಂಟ್ವಾಳ ತಾಲೂಕು ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಿ ನುರಿತ ತಜ್ಞ ವೈದ್ಯರುಗಳ ನೇಮಕ, 24ಐಸಿಯು ಬೆಡ್, 7 ಡಯಾಲಿಸಿಸ್ ಘಟಕದ ಮೂಲಕ ನಿರಂತರ ದಿನ ಒಂದಕ್ಕೆ 72 ರೋಗಿಗಳಿಗೆ ಉಚಿತ ಡಯಾಲಿಸಿಸ್‌ ವ್ಯವಸ್ಥೆ,

9. ರೂ.12.44 ಕೋಟಿ ವೆಚ್ಚದಲ್ಲಿ ಪುಂಜಾಲಕಟ್ಟೆ ಆಸ್ಪತ್ರೆ ಮೇಲ್ದರ್ಜೆಗೆ.

10. ಬಿ.ಸಿ.ರೋಡ್ ನಗರ ಸುಂದರೀಕರಣ ಸುಮಾರು ರೂ.5.00 ಕೋಟಿ ವೆಚ್ಚದಲ್ಲಿ

11. ಪುರಸಭಾ ವ್ಯಾಪ್ತಿಯಲ್ಲಿ ರೂ.40.16 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ (ಅಮೃತ 2), ರೂ.56.54 ಕೋಟಿ ವೆಚ್ಚದಲ್ಲಿ ಒಳಚರಂಡಿ (ಯುಜಿಡಿ) ವ್ಯವಸ್ಥೆ.

12. ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ದೇವಸ್ಥಾನ ಸಂಪರ್ಕಿಸುವ ಸಂಪರ್ಕ ರಸ್ತೆಯ ಸೇತುವೆ ಹಾಗೂ ಕೂಡು ರಸ್ತೆ ನಿರ್ಮಾಣ ರೂ.9.75 ಕೋಟಿ.

13. ಪೆರಾಜೆ ಶ್ರೀ ರಾಮಚಂದ್ರಾಪುರ ಮಠ ಸಂಪರ್ಕಿಸುವ ಬೊಲ್ಲುಕಲ್ಲು-ಕೊಡಾಜೆ ರಸ್ತೆ ಅಭಿವೃದ್ಧಿರೂ.2.5 ಕೋಟಿ.

14. ಅರಳ ಶ್ರೀಗರುಡ ಮಹಾಂಕಾಳಿ ದೇವಸ್ಥಾನ ಕೂಡು ರಸ್ತೆ ರೂ.1.25 ಕೋಟಿ. 15. ಸರಪಾಡಿ ಗ್ರಾಮದ ಮಾವಿನಕಟ್ಟೆಯಿಂದ ಸರಪಾಡಿ (ಶ್ರೀ ಶರಭೇಶ್ವರ ರಥ ಬೀದಿ) ರಸ್ತೆ ಅಭಿವೃದ್ಧಿ ರೂ.2 ಕೋಟಿ.

16. ಗೋಳ್ತಮಜಲು ಗ್ರಾಮದ ನಟ್ಟ ನಿಟಿಲಾಕ್ಷ ದೇವಸ್ಥಾನ ರಸ್ತೆ ಅಭಿವೃದ್ಧಿ ರೂ.1.67 ಕೋಟಿ. 17. ಮಾಣಿ ಗ್ರಾಮದ ಮಾಣಿ ಉಳ್ಳಾಲ್ತಿ ಮಾಡ ರಸ್ತೆ ಅಭಿವೃದ್ಧಿ ರೂ.2 ಕೋಟಿ, ದೈಯ್ಯಂಗುಲು, ಉಳ್ಳಾಲ್ತಿ ಮತ್ತು ನಾಲ್ಕೆತ್ತಾಯ ದೈವಸ್ಥಾನ

18. ಸಜಿಪಮೂಡ ಗ್ರಾಮದ ಶ್ರೀ ನಡಿಯೇಲ್ ರಸ್ತೆ ಅಭಿವೃದ್ಧಿ ರೂ.2.50 ಕೋಟಿ

19, ಬಂಟ್ವಾಳ ಕಸ್ಟಾ ಗ್ರಾಮದ ದರ್ಬಲಿಕೆ, ಕಾರಂಬಡೆ ರಸ್ತೆ ಅಭಿವೃದ್ಧಿ ರೂ.2 ಕೋಟಿ,

20. ತೆಂಕಬೆಳ್ಳೂರು ಗ್ರಾಮದ ಕಾವೇಶ್ವರ ದೇವಸ್ಥಾನದ ರಥಬೀದಿ ರಸ್ತೆ ಅಭಿವೃದ್ಧಿ ರೂ.2.30 ಕೋಟಿ .

21. ವಿಟ್ಲಪಡೂರು ಗ್ರಾಮದ ಮೂರ್ಕಜೆ ಎಂಬಲ್ಲಿ ವಿಟ್ಲ ಪಂಚಲಿಂಗೇಶ್ವರ ದೇವರ ಅವಕೃತ ಸಾನ್ನಘಟ್ಟ ಮತ್ತು ತಡೆಗೋಡೆ ರಚನೆ ರೂ.45 ಲಕ್ಷ.

ಒಟ್ಟು ಅನುದಾನ ರೂ.2095.88 ಕೋಟಿ ಕ್ಷೇತ್ರದಾದ್ಯಂತ ಒಟ್ಟು 1514 ರಸ್ತೆಗಳ ನಿರ್ಮಾಣವಾಗಿದೆ.

34 ಕಿಂಡಿ ಅಣೆಕಟ್ಟುಗಳು 318 ಧಾರ್ಮಿಕ ಕ್ಷೇತ್ರಗಳಿಗೆ ಮೂಲಭೂತ ಸೌಕರ್ಯ ಒದಗಿಸಲಾಗಿದೆ.

Leave a Comment