ಬಂಟ್ವಾಳ : ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನ (ರಿ)ನಂದನಬಿತ್ತಿಲು.ಎ.1.ರಿಂದ 3 ರವರೆಗೆ ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಗಳ ಕಾಲಾವಧಿ ನೇಮೋತ್ಸವವು ನಡೆಯಲಿದೆ.
ಎ.1 ರಂದು ಗಣಹೋಮ, ನಾಗತಂಬಿಲ, ನವಕ ಕಲಶಾಭಿಷೇಕ ಮುಂತಾದ ವೈದಿಕ ಕಾರ್ಯಕ್ರಮ ನಡೆದು ರಾತ್ರಿ 10 ಕ್ಕೆ ಶ್ರೀ ಅರಸು ದೈವಕ್ಕೆ ನೇಮೋತ್ಸವ ಜರಗಲಿದೆ.
ಎ.2 ರಂದು ಶ್ರೀ
ಜುಮಾದಿ ಬಂಟ ದೈವಗಳಿಗೆ ನೇಮೋತ್ಸವ ನಡೆಯಲಿದೆ.ಎ.3 ರಂದು ಶ್ರೀ ವೈದ್ಯನಾಥ ದೈವಕ್ಕೆ ನೇಮೋತ್ಸವ ಮತ್ತು ಕಂಚಿಲಸೇವೆ ಇರಲಿದೆ. ಎಂದು ಆಡಳಿತ ಸಮಿತಿಯ ಗಣೇಶ್ ಸುವರ್ಣ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














