ಹ್ಯೊಗೆಬಜಾರ್: ಹ್ಯೊಗೆಬಜಾರ್ ಫ್ರೆಂಡ್ಸ್ ಕ್ರಿಕೆಟರ್ಸ್ ಇದರ ಆಶ್ರಯದಲ್ಲಿ 22ನೇ ವಾರ್ಷಿಕೋತ್ಸವದ ಅಂಗವಾಗಿ 2022-23ನೇ ಸಾಲಿನ 30 ಗಜಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಡೆದು,ಅಗ್ರ 10 ತಂಡಗಳಿಗೆ ಪ್ರಶಸ್ತಿ ವಿತರಣಾ ಸಮಾರಂಭ ಮಾ.18ರಂದು ಶನಿವಾರ ಎಚ್ ಎಫ್ ಸಿ ಕ್ರಿಡಾಂಗಣದಲ್ಲಿ ನಡೆಯಿತು.
ಅಗ್ರ 10ತಂಡಗಳಾದ ಪ್ರಥಮ ಸ್ಥಾನ ವೈದ್ಯನಾಥ ಅಂಗಡಿಗುಡ್ಡ (28 ಅಂಕ), ದ್ವಿತೀಯ ಸ್ಥಾನ ಶಾಂಭವಿ ನಂದನಪುರ (22 ಅಂಕ), ತೃತೀಯ ಸ್ಥಾನ ಎನ್ ಎಫ್ ಸಿ ಉರ್ವ ( 10 ಅಂಕ), ನಾಲ್ಕನೇ ಸ್ಥಾನ ಎಚ್ ಎಫ್ ಸಿ ಹ್ಯೊಗೆಬಜಾರ್ (10 ಅಂಕ), ಐದನೇ ಸ್ಥಾನ ಲಗನ್ ಕೊಂಚಾಡಿ (10 ಅಂಕ), ಆರನೇ ಸ್ಥಾನ ವಿಶಾಲ್
ಕೊಡಿಕಲ್ (10ಅಂಕ), ಏಳನೇ ಸ್ಥಾನ ಟೀಂ ಅಶೋಕ್ ನಗರ (10 ಅಂಕ), ಎಂಟನೇ ಸ್ಥಾನ ಫ್ರೆಂಡ್ಸ್ ಕುಡುಂಬುರ್ (8 ಅಂಕ), ಒಂಬತ್ತನೇ ಸ್ಥಾನ ಫ್ರೆಂಡ್ಸ್ ಕೆಎಫ್‌ಸಿ ಕೊಂಚಾಡಿ (6 ಅಂಕ), ಹತ್ತನೇ ಸ್ಥಾನ ರಾಮಾಂಜನೇಯ ಚಿಲಿಂಬಿ (4 ಅಂಕ), ತಂಡಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗಣ್ಯ ಅತಿಥಿಗಳು ಸಮಿತಿಯ ಪದಾಧಿಕಾರಿಗಳು, ಕ್ರೀಡಾಭಿಮಾನಿಗಳು ಮತ್ತಿತರರು ಉಪಸ್ಥಿತರಿದ್ದರು.














