ಬಂಟ್ವಾಳ :ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ 139ನೇ ವರ್ಷದ ಸಂಸ್ಥಾಪನ ದಿನಾಚರಣೆ.

Coastal Bulletin
ಬಂಟ್ವಾಳ :ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ 139ನೇ ವರ್ಷದ ಸಂಸ್ಥಾಪನ ದಿನಾಚರಣೆ.

ಬಂಟ್ವಾಳ :ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಆದೇಶದ ಮೇರೆಗೆ 139ನೇ ವರ್ಷದ ಕಾಂಗ್ರೆಸ್ ಪಕ್ಷದ ಸಂಸ್ಥಾಪನ ದಿನಾಚರಣೆಯನ್ನು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ರವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬೇಬಿ ಕುಂದರ್ ಮಾತಾಡಿ, ಭಾರತ ದೇಶ ವಿದೇಶಿಯರ ಕೈಯಲ್ಲಿ ಸಿಕ್ಕಿ ನರಳಾಡುತ್ತಿರುವ ಸಂದರ್ಭದಲ್ಲಿ ದೇಶದ ಕಾಂಗ್ರೆಸ್ ಪಕ್ಷದ ಅನೇಕ ಹಿರಿಯ ಮುಖಂಡರು ಸೇರಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಅನೇಕ ಹೋರಾಟ ಚಳುವಳಿಯನ್ನು ನಡೆಸಿ 1947 ರಲ್ಲಿ ಸ್ವಾತಂತ್ಯ ಸಿಗುವಂತಾಯಿತು ಸ್ವಾತಂತ್ರ್ಯ ಸಿಕ್ಕಿದ ತಕ್ಷಣ ದೇಶದ ಪ್ರಜಾಪ್ರಭುತ್ವ ಉಳಿಯಬೇಕು ದಲಿತ,ಹಿಂದುಳಿದ,ಅಲ್ಪಸಂಖ್ಯಾತ ಮತ್ತು ಶೋಷಿತ ವರ್ಗಕ್ಕೆ ಶಕ್ತಿಯನ್ನು ನೀಡುವಂತಹ ಕಾರ್ಯಕ್ರಮವನ್ನು ಹಾಕಿ ಕಾಂಗ್ರೆಸ್ ಪಕ್ಷ ಕಳೆದ 138 ವರ್ಷಗಳ ಕಾಲ ಈ ದೇಶದಲ್ಲಿ ಬಲಿಷ್ಠವಾಗಿ ಮತ್ತು ಅತಿ ಹೆಚ್ಚು ಸದಸ್ಯತ್ವವನ್ನು ಹೊಂದಿದ ಪಕ್ಷ ಕಾಂಗ್ರೆಸ್ ಪಕ್ಷವಾಗಿದೆ ಮುಂದೆಯೂ ಈ ದೇಶದ ಭದ್ರತೆಗೋಸ್ಕರ

ಈ ದೇಶದ ಭವಿಷ್ಯಗೋಸ್ಕರ ಖಂಡಿತವಾಗಿಯೂ ಹೋರಾಟ ಮಾಡಲು ಕಾಂಗ್ರೆಸ್ ಪಕ್ಷ ಸಿದ್ದವಾಗಿದೆ ಎಂಬ ಮಾತನ್ನು ಹೇಳಿದರು.

ಬಂಟ್ವಾಳ ಪುರಸಭಾ ಸದಸ್ಯ ಜನಾರ್ದನ ಚೆಂಡ್ತಿಮಾರ್ ಧ್ವಜಾರೋಹಣ ಮಾಡುವ ಮುಖಾಂತರ ಕಾರ್ಯಕರ್ಮಕ್ಕೆ ಚಾಲನೆ ನೀಡಿ ಮಾತನಾಡಿ, ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಹುಟ್ಟಿದಂತಹ ಕಾಂಗ್ರೆಸ್ ಪಕ್ಷ ಇವತ್ತು ಜಗತ್ತಿನಲ್ಲಿ ಅತಿ ಹೆಚ್ಚು ಸದಸ್ಯತ್ವವನ್ನು ಹೊಂದಿದೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಜಗನ್ನಾಥ ತುಂಬೆ, ಪ್ರವೀಣ್ ಕಿಣಿ,ವೆಂಕಪ್ಪ ಪೂಜಾರಿ,ಪದ್ಮನಾಭ ಬಡ್ಡಕಟ್ಟೆ , ವಿಜಯ ಅಲ್ಲಿಪಾದೆ,ರಾಜೀವ್ ಕಕ್ಕೆಪದವು, ಅಮ್ಮು ಅರ್ಬಿಗುಡ್ಡೆ, ರಿಯಾಜ್ ಕೆಳಗಿನಪೇಟೆ,ಚಿಕ್ಕ ಅರ್ಬಿಗುಡ್ಡೆ,ವಲಾರ್ ಬಡ್ಡಕಟ್ಟೆ,ನವಾಜ್ ಕೆಳಗಿನಪೇಟೆ,ಪುರುಷೋತ್ತಮ್ ಮಂಡಾಡಿ,ಆಶ್ರಿತ್ ಬಂಗೇರ ಪಂಜಿಕಲ್ಲು,ನಾಸೀರ್ ಕೆಳಗಿನಪೇಟೆ ಮತ್ತಿತರರು ಉಪಸ್ಥಿತರಿದ್ದರು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಾಬಲ ಬಂಗೇರ ಧನ್ಯವಾದವಿತ್ತರು

Leave a Comment