ಬಂಟ್ವಾಳ :ತಾಲೂಕಿನ ತುಂಬೆಯಲ್ಲಿ ಸುಸಜ್ಜಿತವಾದ ಅತ್ಯಾಧುನಿಕ ವಿನ್ಯಾಸದ ಪ್ರಥಮ್ ಮಿನಿ ಹಾಲ್ ಹಾಗೂ ಸಂಗಮ್ ಅಕಾಡೆಮಿಯ ಉದ್ಘಾಟನಾ ಸಮಾರಂಭವು ನ.27ರಂದು ತುಂಬೆಯ ಮೊಯುದ್ದಿನ್ ಮಸೀದಿ ಸಮೀಪದ ಗೌತಮ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ತುಂಬೆ ಗ್ರಾ ಪಂ ಸದಸ್ಯರಾದ ಗಣೇಶ್ ಸಾಲ್ಯಾನ್ ಇವರ ಮಾಲಕತ್ವದ ಪ್ರಥಮ್ ಮಿನಿ ಹಾಲ್ ನ್ನು ಉದ್ಯಮಿ, ಸಮಾಜ ಸೇವಕ, ದ ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸೇಸಪ್ಪ ಕೋಟ್ಯಾನ್ ರವರು ದೀಪ ಬೆಳಗಿಸಿ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು, ಸಂಗಮ್ ಆಕಾಡೆಮಿಯನ್ನು ಶಾಸಕರಾದ ಯು ಟಿ ಖಾದರ್ ಹಾಗೂ ಮಾಜಿ ಜಿ ಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ತುಂಬೆ ಜಂಟಿಯಾಗಿ ಉದ್ಘಾಟಿಸಿ ಶುಭ ಹಾರೈಸಿದರು.
ಸಮಾರಂಭದಲ್ಲಿ ತುಂಬೆ ಗ್ರಾ ಪಂ ಅಧ್ಯಕ್ಷರಾದ ಪ್ರವೀಣ್ ಬಿ ತುಂಬೆ, ಪಂ ಸದಸ್ಯರಾದ ಮೊಹಮ್ಮದ್ ವಳವೂರು, ತಾಲೂಕು ಬಿಲ್ಲವ ಸಂಘದ ಕೋಶಾಧಿಕಾರಿ ಉಮೇಶ ಸುವರ್ಣ ತುಂಬೆ, ಹಿರಿಯ ಕಾಂಗ್ರೆಸ್ ಮುಖಂಡ ಮೋನಪ್ಪ ಮಜಿ, ಕಲಾವಿದ ಸದಾಶಿವ
ಡಿ ತುಂಬೆ, ಮಾಜಿ ಜಿ ಪಂ ಸದಸ್ಯರಾದ ಉಮರ್ ಫಾರೂಕ್, ಇಮ್ತಿಯಾಜ್ ತುಂಬೆ, ರಮೇಶ್ ತುಂಬೆ, ರಾಮಚಂದ್ರ ಸುವರ್ಣ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉದ್ಯಮಿ, ಸಮಾಜ ಸೇವಕ, ದ ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸೇಸಪ್ಪ ಕೋಟ್ಯಾನ್ ರನ್ನು ಸಂಸ್ಥೆಯ ಮಾಲಕರದ ಗಣೇಶ್ ಸಾಲ್ಯಾನ್ ದಂಪತಿಗಳು ಅತಿಥಿ ಗಣ್ಯರೊಡಗೂಡಿ ಸನ್ಮಾನಿಸಿ ಅಭಿನಂದಿಸಿದರು.
ಸಭಾಂಗಣ ಹಾಗೂ ಅಕಾಡೆಮಿಯ ವೈಶಿಷ್ಯಗಳು:
ಪ್ರಥಮ್ ಮಿನಿ ಹಾಲ್ ಅತ್ಯಾದುನಿಕ ವಿನ್ಯಾಸದ 100 ಆಸನಗಳನ್ನು ಒಳಗೊಂಡ ಸುಸಜ್ಜಿತವಾದ ಸಭಾಂಗಣವಾಗಿದ್ದು, ಸಭೆ ಸಮಾರಂಭ ಗಳಿಗೆ ಕಡಿಮೆ ದರದಲ್ಲಿ ಬಾಡಿಗೆಗೆ ಲಭ್ಯವಿದೆ.
ಸಂಗಮ್ ಅಕಾಡೆಮಿಯಲ್ಲಿ ಭರತನಾಟ್ಯ, ಫ್ಲೋಟ್, ಪೇಂಟಿಂಗ್, ಡ್ರಾಯಿಂಗ್, ಕರಾಟೆ, ,ಜುಂಬ ಹಾಗೂ ಟ್ಯೂಷನ್ ತರಗತಿಗಳು ಲಭ್ಯವಿದ್ದು,ನುರಿತ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ.















