Coastal Bulletin

ಬಂಟ್ವಾಳ : ರೋಟರಿ ಕ್ಲಬ್ ಬಿ.ಸಿ.ರೋಡು ಸಿಟಿ ವತಿಯಿಂದ 2024-25ರ ನಿಯೋಜಿತ ಅಧ್ಯಕ್ಷರಾದ ರೋ ಶೇಷಪ್ಪ ಮಾಸ್ಟರ್ ಹಾಗೂ ಭಾರತಿ ಶೇಷಪ್ಪ ಇವರ ಪ್ರಯೋಜಕತ್ವದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಸ್ಪರ್ಧಾಳುಗಳಿಗೆ ಅಭಿನಂದನೆ ಹಾಗೂ ಡಿನ್ನರ್ ಮೀಟ್, ಕಾರ್ಯಕ್ರಮ ನ.26ರಂದು ರೋಟರಿ ಕ್ಲಬ್ ಬಿಸಿರೋಡ್ ನಲ್ಲಿ ನಡೆಯಿತು.

ಖ್ಯಾತ ನಿರೂಪಕ ಹಾಗೂ ರಂಗಭೂಮಿ ಕಲಾವಿದ ಹೆಚ್.ಕೆ.ನೈನಾಡು , ಪತ್ರಕರ್ತ ಸಂತೋಷ ಕುಲಾಲ್ ನೆತ್ರಕೆರೆ ಹಾಗೂ ಪತ್ರಕರ್ತ ಪ್ರದೀಪ್ ಕುಕ್ಕಿಪಾಡಿ ಇವರ ಸಾಧನೆಯನ್ನು ಗುರುತಿಸಿ ಕ್ಲಬ್ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು.

ಇದೇ ವೇಳೆ ಬೀಚ್ ಕ್ರೀಡಾಕೂಟದಲ್ಲಿ ಭಾಗಿಯಾಗಿ ಪದಕ ಪಡೆದ ರೋಟರಿ ಸದಸ್ಯ ಸ್ಪರ್ಧಾಳುಗಳನ್ನು ಈ

ಸಂದರ್ಭದಲ್ಲಿ .ವೇದಿಕೆಯಲ್ಲಿ ಗೌರವಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಬಂಟ್ವಾಳದ ಅಧ್ಯಕ್ಷರಾದ ಪಲ್ಲವಿ ಕಾರಂತ್ , ರೋ ಎನ್ ಪದ್ಮನಾಭ ರೈ, ರೋ ರಾಘವೇಂದ್ರ ಭಟ್, ರೋ ಇಲ್ಯಾಸ್ ಸ್ಟ್ಯಾಂಟಿಸ್ಟ್, ಅಸಿಸ್ಟಂಟ್ ಗವರ್ನರ್ ಮಂಜುನಾಥ್ ಆಚಾರ್ಯ,ಝೋನಲ್ ಲೆಫ್ಟಿಂನೆಂಟ್ ಸತೀಶ್ ಕುಮಾರ್ ಕೆ, ಕಾರ್ಯದರ್ಶಿ ಆಶಾಮಣಿ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Comment